ಉದಯವಾಹಿನಿ,ಯಾದಗಿರಿ: ಜಾರ್ಖಂಡ್‌ನ ರಾಂಚಿಯಲ್ಲಿ ಬಂಧನಕ್ಕೊಳಗಾದ ಆರೋಪಿ ಫೈಯಾಜ್ ಜೊತೆ ಸಂಪರ್ಕ ಹೊಂದಿರುವ ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ನಗರದ ನಿವಾಸಿ ಖಾಲೀದ್ ಅಹ್ಮದ್‌(Khalid Ahmed) ನಿವಾಸದ ಮೇಲೆ ಎನ್‌ಐಎ ದಾಳಿ ಮಾಡಿದೆ.ನಸುಕಿನ ಜಾವ ಶಹಾಪುರ ನಗರದಲ್ಲಿ ಖಾಲೀದ್ ಅಹ್ಮದ್ ನಿವಾಸದ ಮೇಲೆ ದಾಳಿ ಮಾಡಿ, ಎನ್‌ಐಎ(NIA) ತಂಡ ವಿಚಾರಣೆ ನಡೆಸಿದೆ.ರಾಂಚಿ ಮೂಲದ ಎನ್‌ಐಎ ತಂಡ ಇಲ್ಲಿಗೆ ಬಂದಿದೆ. ಖಾಲೀದ್ ಅಹ್ಮದ್ ನ ತೀವ್ರ ವಿಚಾರಣೆ ನಡೆಸಿ, ಇದೇ 20 ರಂದು ಮತ್ತೆ ರಾಂಚಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಎನ್‌ಐಎ ತಂಡ ಖಾಲೀದ್ ಅಹ್ಮದ್‌ನ ಎರಡು ಮೊಬೈಲ್ ಜಪ್ತಿ ಮಾಡಿದೆ. ಆಧಾರ್‌ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಜೇರಾಕ್ಸ್ ಪ್ರತಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದೆ. ಸದ್ಯ ಎನ್‌ಐಎ ತಂಡದಿಂದ ಖಾಲಿದ್ ವಿಚಾರಣೆ ಮುಕ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!