ಉದಯವಾಹಿನಿ, ಮುದ್ದೇಬಿಹಾಳ ; 3 ತಿಂಗಳಿಂದ ವೇತನ ಕ್ಕೆ ಆಗ್ರಹಿಸಿ ಬುಧುವಾರ ದಿಢೀರ್ ಪ್ರತಿಭಟನೆ ಗೆ ಇಳಿದಿದ್ದ ಅಡವಿಸೋಮನಾಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಮಾಡುವ ಗುತ್ತಿಗೆ ನೌಕರರು ಗುರುವಾರ ಅಧಿಕಾರಗಳ ಸಂಧಾನದಿಂದ ಹೋರಾಟ ಅಂತ್ಯ ಮಾಡಿದ್ದಾರೆ. 32 ಗ್ರಾಮಗಳಿಗೆ ನೀರು ಪೂರೈಕೆ ಸ್ಥಗಿತ ಮಾಡಿ ಮಾಡುತ್ತಿರುವ ಹೋರಾಟದಿಂದ ಗ್ರಾಮಸ್ಥರಿಗೆ ಸಮಸ್ಯೆ ಕುರಿತು ಉದಯವಾಹಿನಿ ಪತ್ರಿಕೆಯ ವರದಿ ಎಚ್ಚೆತ್ತುಕೂಂಡ ಕುಡಿಯುವ ನೀರು ಸರಬರಾಜು ಕಿರಿಯ ಅಭಿಯಂತರ ಎನ್ ಬಿ ನಾಯಕ ನಾಗರಬೆಟ್ಟ ಕುಡಿಯುವ ನೀರು ಘಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ. ನೌಕರರ ಸಮಸ್ಯೆ ಆಲಿಸಿ ಗುತ್ತಿಗೆದಾರ ಎಂ.ವಿ ಯರಸಿ ಕರೆಯಿಸಿ ನೌಕರರ ಬಾಕಿ ಇರುವ 3 ತಿಂಗಳ ಪಾವತಿಸುವಂತೆ ಹೇಳಿದರಲ್ಲದೆ , ಮಲ್ಲಿಕಾರ್ಜುನ ಹಿರೇಮಠ, ಯಲ್ಲಪ್ಪ ಚಲವಾದಿ ಮತ್ತು ಎಲ್ಲಾ ನೌಕರರ ಬೇಡಿಕೆಯಂತೆ ಪ್ರತಿ 2 ತಿಂಗಳಿಗೆ ವೇತನ ನೀಡಬೇಕೆಂದು ಸೂಚಿಸಿದರು. ಅಧಿಕಾರಿಗಳ ಮತ್ತು ಗುತ್ತಿಗೆದಾರರು ನೀಡಿದ ಭರವಸೆ ಮೇರಗೆ ನೀರು ಸರಬರಾಜು ಮಾಡುವ ನೌಕರರು ಹೋರಾಟ ಹಿಂದಕ್ಕೆ ಪಡೆದು ಕರ್ತವ್ಯ ಕ್ಕೆ ಹಾಜರಾಗಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಿದರು
