ಉದಯವಾಹಿನಿ, ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬಳ್ಳಾರಿ, ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ೨೦೨೩ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ರಮೇಶ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ದಸರಾ ಉತ್ಸವದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಲು ತಾಲೂಕು ಮಟ್ಟದಲ್ಲಿ ಕ್ರೀಡೆಗಳನ್ನು ನಡೆಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ವಿಜಯದ ಉದ್ದೇಶಕ್ಕಾಗಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸದೇ ನಿಮ್ಮ ಸಾಮರ್ಥ್ಯಕ್ಕನುಸಾರವಾಗಿ ಸ್ಪರ್ಧೆಯನ್ನು ಎದುರಿಸಿ ವಿಜೇತರಾಗಿ ರಾಜ್ಯ ಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತರಬೇಕೆಂದರು. ಅಲ್ಲದೇ ಇದರಲ್ಲಿ ಶಾಲಾ, ಕಾಲೇಜ್, ಸಾರ್ವಜನಿಕರು ಯುವಕರು ಸೇರಿದಂತೆ ಎಲ್ಲರೂ ಭಾಗವಹಿಸಬಹುದಾಗಿದೆಂದು ತಿಳಿಸಿದರು.ಕಾರ್ಯಕ್ರಮವನ್ನುದ್ದೇಶಿಸಿ ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಕರಿಬಸಪ್ಪ ಮಾತನಾಡಿದರು.
ಇದೇ ವೇಳೆ ಗ್ರೇಡ್-೨ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕಾಧ್ಯಕ್ಷ ಬಿ.ಈರಣ್ಣ, ದೈಹಿಕ ಶಿಕ್ಷಕರಾದ ಉಪೇಂದ್ರ, ಚೆನ್ನಪ್ಪ, ದಾನಪ್ಪ, ಮಲ್ಲಿಕಾರ್ಜುನಗೌಡ, ಅಜ್ಮೀರ್, ಶಾರದ, ಮಲ್ಲಮ್ಮ, ಯೋಗಿರಾಜ, ಅಡಿವೆಪ್ಪ, ಜಿಲ್ಲಾ ನೋಡಲ್ ಅಧಿಕಾರಿ ಜಾಕೀರ್, ತರಬೇತುದಾರ ರವಿ, ನಗರಸಭೆ ಸದಸ್ಯರಾದ ಮೋದೀನ್, ಹೆಚ್.ಗಣೇಶ್, ಮುಖಂಡರಾದ ಮುತ್ಯಾಲಯ್ಯ, ಅಬ್ದುಲ್‌ನಬಿ, ಕೋಟಿರೆಡ್ಡಿ ಇನ್ನಿತರರು ಇದ್ದರು

Leave a Reply

Your email address will not be published. Required fields are marked *

error: Content is protected !!