
ಉದಯವಾಹಿನಿ,ಮುದ್ದೇಬಿಹಾಳ ; ಮುದ್ದೇಬಿಹಾಳ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕಲೋತ್ಸವದಲ್ಲಿ ಮುದ್ದೇಬಿಹಾಳ ಪಟ್ಟಣದ ಹೊರವಲಯದ ಆಕ್ಸ್‌ಫರ್ಡ್ ಪಾಟೀಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ವಿಜೇತರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಪಟ್ಟಣದ ಕನಕದಾಸ ಶಾಲೆಯಲ್ಲಿ ಬುಧುವಾರ ನಡೆದ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕಲೋತ್ಸವದಲ್ಲಿ 14 ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾಕಲೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳು ; ಮಿಮಿಕ್ರಿ ವಿಭಾಗದಲ್ಲಿ ಧರಣೇಂದ್ರ ಗೋಗಿ ಪ್ರಥಮ ,ಚರ್ಚಾ ಸ್ಪರ್ಧೆಯಲ್ಲಿ ಹತ್ತನೆ ತರಗತಿ ವಿದ್ಯಾರ್ಥಿನಿ ಸಹನಾ ಪಟೇಲ್ ಪ್ರಥಮ, ಆಂಗ್ಲ ಭಾಷಣ ಸ್ಪರ್ಧೆಯಲ್ಲಿ 9 ನೇ ತರಗತಿ ವಿದ್ಯಾರ್ಥಿ ಕಾಸಿಂಬಿ ಮುಲ್ಲಾ ಪ್ರಥಮ, ಛದ್ಮವೇಷ ಸ್ಪರ್ಧೆಯಲ್ಲಿ ಶಶಾಂಕ ಮನಗೊಳಿ ಪ್ರಥಮ, ಕ್ಷಿಜ್ ಸ್ಪರ್ಧೆಯಲ್ಲಿ ಸಹನಾ ಪಟೇಲ್ ಪ್ರಥಮ, ಯಶವಂತ ರಾಠೋಡ ದ್ವೀತಿಯ, ಹಿಂದಿ ಭಾಷಣ ಸ್ಪರ್ಧೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ .ಅ. ಹಡಪದ ದ್ವೀತಿಯ ,ಕನ್ನಡ ಭಾಷಣ ಸ್ಪರ್ಧೆಯಲ್ಲಿ ರಾಜೇಶ್ವರಿ ಬಿರಾದಾರ ದ್ವಿತೀಯ, ಜಾನಪದ ಸಾಮೂಹಿಕ ನೃತ್ಯ ದಲ್ಲಿ 10 ನೇ ತರಗತಿ ವಿದ್ಯಾರ್ಥಿ ತೃತೀಯ ಸ್ಥಾನ, ಗಜಲ್ ಸ್ಪರ್ಧೆಯಲ್ಲಿ ಅಬುಸ್ ಅವಟಿ ತೃತೀಯ, ಧಾರ್ಮಿಕ ಸಂಸ್ಕೃತ ಪಠಣದಲ್ಲಿ ಶಾಂಭವಿ ನಾಶಿ ತೃತೀಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಶಿವಾನಿ ಪಟೇಲ್ ತೃತೀಯ, ಕವನ ವಾಚನದಲ್ಲಿ ಅಸ್ಮಿತಾ ಪೂಜಾರಿ ತೃತೀಯ ಸ್ಥಾನ ಪಡೆದಿದ್ದಾರೆ. ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್ ಪಾಟೀಲ್ ವಿದ್ಯಾರ್ಥಿಗಳು ಜಿಲ್ಲಾ ಮತ್ತು ರಾಜ್ಯಮಟ್ಟದ ತಮ್ಮ ಪ್ರತಿಭೆಯಿಂದ ಮಿಂಚಬೇಕೆಂದು ಶುಭಹಾರೈಸಿದ್ದಾರೆ ಹಾಗೂ ಅಮಿತ್ ಪಾಟೀಲ್ ಮತ್ತು ಪ್ರೌಢಶಾಲಾ ಯ ಮುಖ್ಯಗುರು ರವಿ ಬಿರಾದಾರ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
