ಉದಯವಾಹಿನಿ, ಸಿರುಗುಪ್ಪ : ನಗರದ ಪೋಲೀಸ್ ಠಾಣೆಯ ಆವರಣದಲ್ಲಿ ಶ್ರೀಗೌರಿ ಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ಆಚರಣೆ ಪ್ರಯುಕ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜೀತ್‌ಕುಮಾರ್ ಭಂಡಾರ್ ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹಬ್ಬಗಳು ಶಾಂತಿ ಸಾಮರಸ್ಯದ ಪ್ರತೀಕವಾಗಿವೆ. ಶಾಂತಿ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡದೇ ಕಾನೂನು ಸುವ್ಯವಸ್ಥೆಗೆ ಭಂಗವನ್ನುAಟು ಮಾಡದೇ ಹಬ್ಬಗಳನ್ನು ಆಚರಿಸಿ, ಕಾನೂನು ಕಾಪಾಡಲು ಕೈಗೊಳ್ಳದೇ ನಿಮ್ಮ ಆಚರಣೆಗಳಿಗೆ ಮುಂದಾಗಬೇಕೆ0ದರು.ತಹಶೀಲ್ದಾರ್ ಎಚ್.ವಿಶ್ವನಾಥ ಅವರು ಮಾತನಾಡಿ ನಿಯಮಗಳಿಗೆ ಅನುಸಾರವಾಗಿ ಹಬ್ಬ ಆಚರಣೆ ಮುಂದಾಗುವುದರೊAದಿಗೆ ಉತ್ತಮ ಮನೋಭಾವನೆಯಿಂದ ಹಬ್ಬಗಳನ್ನು ಆಚರಿಸೋಣವೆಂದರು.ಬಸವಭೂಷಣ ಶ್ರೀಗಳು ಮಾತನಾಡಿ ಪ್ರಕೃತಿಯಲ್ಲಿ ಪಶು ಪಕ್ಷಿಗಳು ಶಾಂತಿ ಸಹಬಾಳ್ವೆಯಿಂದ ಜೀವಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದರಂತೆ ಮಾನವರಾದ ನಾವು ಯಾರ ಧಾರ್ಮಿಕ ಆಚರಣೆಗೆ ಧಕ್ಕೆ ತರದೇ ಸಂವಿಧಾನ ನಿಯಮಗಳನ್ನೂ ಮೀರದೇ ಹಬ್ಬಗಳನ್ನು ಆಚರಿಸೋಣವೆಂದರು.ನಗರದ ಠಾಣೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ, ಮಹಾತ್ಮ ಗಾಂದೀಜಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕಾಳಿಕಾಕಮಠೇಶ್ವರಿ ದೇವಸ್ಥಾನ, ಪ್ಯಾಟೆ ಆಂಜನೇಯ್ಯಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪೋಲೀಸ್ ಪಥಸಂಚಲನ ನಡೆಸಲಾಯಿತು.ಇದೇ ವೇಳೆ ಪ್ರಭಾರಿ ಡಿವೈಎಸ್‌ಪಿ ಎಸ್.ಟಿ.ಒಡೆಯರ್, ಸಿಪಿಐ ಸುಂದ್ರೇಶ್ ಹೊಳೆಣ್ಣನವರ್, ತಾಲೂಕು ಪಂಚಾಯಿತಿಯ ಗಂಗಯ್ಯಸ್ವಾಮಿ, ಪಿ.ಎಸ್.ಐಗಳಾದ ಪಂಪಾಪತಿ, ಶಾಂತಮೂರ್ತಿ, ಸದ್ದಾಂಹುಸೇನ್, ಅಬಕಾರಿ ಇಲಾಖೆ ಸಿಪಿಐ ಕೀರ್ತನಾ, ಮುಖಂಡರಾದ ಜಯಪ್ರಭು, ಡಾ.ಮಹಮದ್‌ಅಲಿ, ಕೆಕೆಆರ್‌ಪಿ ಮುಖಂಡ ಮಾರೆಪ್ಪ, ಕಂಬಳಿ ಮಲ್ಲಿಕಾರ್ಜುನ, ವಿಶ್ವ ಹಿಂದೂಪರಿಷತ್ ತಾಲೂಕು ಉಪಾಧ್ಯಕ್ಷ ಆನಂದ ಹೆಗಡೆ, ಆರ್‌ಎಸ್‌ಎಸ್ ಸಂಯೋಜಕ ಆರ್.ಹೇಮನಗೌಡ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!