ಉದಯವಾಹಿನಿ ಬಂಗಾರಪೇಟೆ: ಅಂತರಾಷ್ಟಿಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಭಾರತ ಸಂವಿಧಾನದ ಪ್ರಸ್ತಾವನೆಯು ಪ್ರಜಾಸತ್ಮಾಕ ಮೌಲ್ಯಗಳ ಘನತೆಯನ್ನು ಹೆಚ್ಚಿಸುವ ಪ್ರತೀಕವಾಗಿದೆ ಎಂದು ತಹಸೀಲ್ದಾರ್ ರಶ್ಮಿ ಅವರು ಅಭಿಪ್ರಾಯಪಟ್ಟರು.ಪಟ್ಣಣದ ಅಂಬೇಡ್ಕರ್ ಪ್ರತಿಮೆಯ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪ್ರಸ್ಥಾವನೆಯನ್ನು ವಾಚಿಸುವುದರ ಮೂಲಕ ಮಾತನಾಡಿದ ಅವರು, ಭಾರತ ಸಂವಿಧಾನದ ಪ್ರಸ್ಥಾವನೆಯಲ್ಲಿ ನಮೂದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರö್ಯ, ಸಮಾನತೆ, ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನಲ್ಲಿ ಅಳವಡಿಸಿಕೊಂಡಾಗ ಮಾತ್ರ, ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ಸಿಗುತ್ತದೆ. ಪ್ರಸ್ಥಾವನೆ ಅಂಶಗಳು ಕೇವಲ ಓದುವುದಕ್ಕೆ ಸೀಮಿತವಾಗದೇ ಜೀವನದ ಪಥವಾಗಬೇಕು. ಪ್ರತಿಯೊಂದು ಶಾಲಾ ಕಾಲೇಜು ಮತ್ತು ಇಲಾಖೆಗಳಲ್ಲಿ ಪ್ರಜಾ ಪ್ರಭುತ್ವದ ದಿನದ ಅಂಗವಾಗಿ ಪ್ರಸ್ಥಾವನೆ ವಾಚನ ಮಾಡುವುದು ದೇಶದ ಘನತೆಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.

ಗೈರಾದ ದಲಿತಪರ ಸಂಘಟನೆಗಳು:
ತಾಲ್ಲೂಕು ಆಡಳಿತ ಆಯೋಜಿಸಿದ್ದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಬಹುತೇಕ ದಲಿತಪರ ಸಂಘಟನೆಗಳು ಭಾಗವಹಿಸಲಿಲ್ಲ, ಮತ್ತು ಪ್ರತೇಕವಾಗಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಪ್ರಸ್ತಾವನೆ ಓದುವುದರ ಮೂಲಕ ಗೌರವ ಸಮರ್ಪಿಸಿದರು.ಈ ಸಂದರ್ಭದಲ್ಲಿ ಇಓ ರವಿಕುಮಾರ್, ಪುರಸಭೆ ಸಿಒ ಮೀನಾಕ್ಷಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಾರೆಡ್ಡಿ, ಅಂಜಲಿದೇವಿ, ಆರೋಗ್ಯ ನಿರೀಕ್ಷಕ ಗೋವಿಂದರಾಜುಲು, ಅಕ್ಷರ ದಾಸೋಹ ನಿರ್ದೇಶಕ ಯುವರಾಜ್, ಎಇಇ ರವಿ, ಗ್ರಂಥಾಲಯ ಸಿಬ್ಬಂದಿ ಜಯಂತ್‌ಕುಮಾರ್, ಪುರಸಭೆ ಸದಸ್ಯರಾದ ಶಫಿ, ಗಂಗಮ್ಮ, ರತ್ನಮ್ಮ, ರಾಕೇಶ್, ಅ.ನಾ.ಹರೀಶ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!