
ಉದಯವಾಹಿನಿ ಸಿಂಧನೂರು : ಡಾ ಬಾಬಾಸಾಹೇಬ ಅಂಬೇಡ್ಕರ್ ಬರೆದಿರುವ ಸಂವಿಧಾನ ಇಡೀ ದೇಶಕ್ಕೆ ದೊಡ್ಡ ಕೊಡುಗೆ. ಇವತ್ತು. ಬೇಧ ಭಾವ ಇಲ್ಲದೆ ಸಂವಿಧಾನ ಎಲ್ಲರಿಗೂ ಒಂದೇ ಕಾನೂನು ಯಾಗಿದೆ.ಅಂತಹಾ ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ತಾಲ್ಲೂಕು ತಹಶೀಲ್ದಾರ್ ಅರುಣ್ ಕುಮಾರ್ ಎಚ್ ದೇಸಾಯಿ ಹೇಳಿದರು.
ನಗರದ ಟೌನ್ ಹಾಲ್ ನಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಕುರಿತು ಸಾಮೂಹಿಕ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ರಾಜ್ಯ ಸರ್ಕಾರ ನೇರ ಪ್ರಸಾರದ ಮೂಲಕ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂವಿಧಾನದ ಪೀಠಕ್ಕೆ ಕಾರ್ಯಕ್ರಮ ಇಡೀ ದೇಶದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದೆ.ನಮ್ಮ ಭಾರತ ದೇಶದ ಸಂವಿಧಾನದ ಆಶೆ ಮೌಲ್ಯಗಳು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ತಿಳಿಸುವಂತೆ ಕೆಲಸ ಪ್ರತಿಯೊಬ್ಬ ವ್ಯಕ್ತಿಯ ಕಾಯಕ ಆಗಬೇಕು.ವರ್ಷ ವರ್ಷ ಕಳೆದರೂ ಸಹ ಗಟ್ಟಿಯಾಗಿ ಇರುವಂತದ್ದು ಸಂವಿಧಾನದ ಗ್ರಂಥ ಮಾತ್ರ. ಎಂದು ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಅವತ್ತೇ ಹೇಳಿದ್ದಾರೆ.ಈ ನಮ್ಮ ಭಾರತ ದೇಶದ ಸಂವಿಧಾನದ ಶ್ರೇಷ್ಠವಾದದ್ದು.ಅಧಿಕಾರಿಗಳು ಅನುಷ್ಠಾನಕ್ಕೆ ತರುವಲ್ಲಿ ಶ್ರಮ ಮುಖ್ಯ.ಎಂದರು
ಈ ಸಂದರ್ಭದಲ್ಲಿ. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಮ್ ದೊಡ್ಡ ಬಸವರಾಜ. ಎಪಿಎಂಸಿ ಮಲ್ಲನಗೌಡ ಬಾದರ್ಲಿ. ಪೌರಾಯುಕ್ತರು ಮಂಜುನಾಥ್ ಗುಂಡೂರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯ್ ಎಸ್ ಕೆ.ಇ.ಒ. ಚಂದ್ರಶೇಖರ್ ಬಿ ಸಿ ಎಂ ಇಲಾಖೆ ಲಿಂಗಪ್ಪ ಅಂಗಡಿ.ಬಿಇಒ ಸೋಮಶೇಖರ್ ಗೌಡ.ಸಿಡಿಪಿಒ ಲಿಂಗನಗೌಡ. ಚಂದ್ರ ಶೇಖರ ನೌಕರರ ಸಂಘದ ಅಧ್ಯಕ್ಷ. ನಗರ ಠಾಣೆಯ ಪಿಎಸ್ಐ ದುರ್ಗಪ್ಪ ಡೊಳ್ಳಿನ.ಶಿವಮಾನಪ್ಪ ವೇದಿಕೆ ಮೇಲೆ ಉಪಸ್ಥಿತರಿದ್ದರು. ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ವಿವಿಧ ಸಂಘಟನೆಗಳು ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
