
ಉದಯವಾಹಿನಿ ಮುದ್ದೇಬಿಹಾಳ ; ಮಕ್ಕಳ ವ್ಯಕ್ತಿ ವಿಕಸನಕ್ಕೆ ಪ್ರತಿಭಾ ಕಾರಂಜಿ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ ಧರಿಕಾರ ಹೇಳಿದರು ಅವರು ಶುಕ್ರವಾರ ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಹಿರೇಮುರಾಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು
ಮಕ್ಕಳಿಗೆ ವರ್ಗಕೋಣೆಗಳ ಆಚೆಯೂ ಸಹ ಮಕ್ಕಳ ಜ್ಞಾನ ವಿಕಸನ ಪೂರ್ಣವಸಗಲು ಸಾಧ್ಯ ಸರಕಾರ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಮಕ್ಕಳ ದೈಹಿಕ ಸಾಮರ್ಥ್ಯಕ್ಕೆ ಕೀಡಾಕೂಟ ಮಕ್ಕಳ ಮಾನಸಿಕ ಸಮತೆಗೆ ಪ್ರತಿಭಾ ಕಾರಂಜಿ ಮಾಡಿದ್ದು ಪ್ರತಿಯೊಬ್ಬ ಮಗುವಿನ ಪ್ರತಿಭಗೆ ವೇದಿಕೆಯಾಗಿದೆ ಎಂದರು ನಿವೃತ್ತ ಮುಖ್ಯ ಇಂಜಿನಿಯರ್ ಬಿ
ಬಿ ಪಾಟೀಲ್, ಇಸಿಒ ಎ.ಬಿ ಬಗಲಿ ಮತ್ತು ವೀರಭದ್ರ ಹಿರಿಯ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಅದ್ಯಕ್ಷ ನಾಗರಾಜ ರಾಮೋಡಗಿ ಮಾತನಾಡಿ ಈ ಕಾರ್ಯಕ್ರಮ ಮಕ್ಕಳ ಪ್ರತಿಭೆಗೆ ಕೈಗನ್ನಡಿಯಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆ ಅಡಗಿರುತ್ತದೆ ಅಂತಹ ಪ್ರತಿಭೆ ಗುರುತಿಸಲು ಸಹಕಾರಿಯಾಗಿದೆ ಇಂದು ನಮ್ಮ ದೇಶದಲ್ಲಿ ಎಷ್ಟು ಪ್ರತಿಭೆಗಳಿದ್ದರು ಅವರನ್ನು ಗುರುತಿಸಲು ಆಗುತ್ತಿಲ್ಲ, ನೈಜ ಪ್ರತಿಭೆಗಳನ್ನು ಗುರುತಿಸಿದರೆ ಒಲಿಂಪಿಕ್ಸ್ ನಲ್ಲಿ ನಾವು ಚಿನ್ನವನ್ನು ಗೆಲ್ಲಬಹುದಾಗಿದೆ ಎಂದರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ವಿಭಾಗದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣ ಮಾಡಿದರು ಈ ವೇಳೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂಗಣ್ಣ ರಾಮೋಡಗಿ, ಗ್ರಾಪಂ ಸದಸ್ಯ ಬಸವಂತರಾಯ ನಾಗರತ್ತಿ, ಮುಖಂಡರಾದ ಬಿ ಬಿ ಭೂವಿ, ಪೀರಸಾಬ ಮುಲ್ಲಾ,ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಸಂಗಮೇಶ ಹಲ್ದೂರ,ಎನ್ ಎಸ್ ತುರಡಗಿ,ಎ.ಹೆಚ್ ಖಾಜಿ, ಸಿ ಆರ್ ಪಿ ಹೆಚ್ ಎನ್ ಭೋವಿ, ಜಿ ವೈ ಬಶೆಟ್ಟಿ,ಎಂ.ಬಿ ಪಾಟೀಲ್, ಬಿ ಹೆಚ್ ಮುದ್ನೂರ,ಡಿ ಬಿ ದನದಮನಿ,ಮುಖ್ಯಗುರು ಸುರೇಶ ಅಗ್ನಿ, ಸೇರಿದಂತೆ ಶಿಕ್ಷಣ ಸಂಸ್ಥೆಯ ಶಿಕ್ಷಕರು ಶಿಕ್ಷಕಿಯರು ವಿವಿಧ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಪ್ರಾರ್ಥನೆ ಮೇಘಾ ,ಸುರೇಖಾ,ಸ್ವಾಗತ ಗೀತೆ ರೋಹಿಣಿ, ಸ್ವಾಗತ ಹೆಚ್ ಎನ್ ಭೋವಿ,ವಂದನಾರ್ಪಣೆ ಮರಿಸ್ವಾಮಿ ಮಠಪತಿ ಮಾಡಿದರು.
