ಉದಯವಾಹಿನಿ ಇಂಡಿ: ಪುರಸಭೆ ವತಿಯಿಂದ ನೂತನವಾಗಿ ಕಟ್ಟುತ್ತಿರುವ ಮೆಗಾ ಮಾರು ಕಟ್ಟೆ ಮಳಿಗೆಗಳ ಹರಾಜು ವಿರೋಧಿಸಿ ಪುರಸಭೆ ಸದಸ್ಯರು, ಅಂಗಡಿಕಾರರು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಪುರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇ ಶಿಸಿ ಮಾತನಾಡಿದ ಪುರಸಭೆ ಸದಸ್ಯ ರಾದ ಅನಿಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಬುದ್ದುಗೌಡ ಪಾಟೀಲ ಅವರು, ಸದರಿ ಟೆಂಡ ರ್‌ನ್ನು ಪುರಸಭೆ ಸದಸ್ಯರ ಗಮನಕ್ಕೆ ತರದೇ ಕರೆಯಲಾಗಿದೆ. ಅಲ್ಲದೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಮಳಿಗೆ ಕಳೆದುಕೊಂಡ ವರಿಗೆ ಮೆಗಾ ಮಾರುಕಟ್ಟೆಯಲ್ಲಿ ಮಳಿಗೆ ಕೊಡುವುದಾಗಿ ಪುರಸಭೆ ಯಿಂದ ಭರವಸೆ ನೀಡಲಾಗಿತ್ತು. ಮತ್ತು ಹರಾಜಿನಲ್ಲಿ ಐದು ಲಕ್ಷದವ ರೆಗೆ ಡಿಪಾಜಿಟ್ ಮತ್ತು ಒಂಭತ್ತುಸಾವಿರ ರೂ.ಬಾಡಿಗೆ ಮಾಡಿರುವದ ರಿಂದ ಬಡ ವ್ಯಾಪಾರಸ್ಥರಿಗೆ ತೊಂದ ರೆಯಾಗುತ್ತದೆ. ಮತ್ತು ಪ.ಜಾ. ಮತ್ತು ಪ.ಪಂ. ಸಮುದಾಯದವ ರಿಗೆ ಕಾಯ್ದಿಸಿದ ಮಳಿಗೆಗಳಿಗೂ ಅಧಿಕ ಬಾಡಿಗೆ ನಿಗದಿಪಡಿಸಿದ್ದಾರೆ ಎಂದು ಆರೋಪಿಸಿದರು.ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಉಪ ವಿಭಾಗಾಧಿಕಾರಿ ಮತ್ತು ಪುರಸಭೆ ಆಡಳಿತಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಟೆಂಡರ್ ಪ್ರಕ್ರಿಯೆ ಈ ಮೊದಲೇ ಆಗಿತ್ತು. ಈ ಮೊದಲಿನ ಪುರಸಭೆ ಮುಖ್ಯಾಧಿಕಾರಿಗಳು ನೂರು ಮಳಿಗೆಗಳ ಕೆಲಸ ಮುಗಿದಿದ್ದು ಟೆಂಡರ್ ಪ್ರಕ್ರಿಯೆಗೆ ಸಮ್ಮುಖದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದಿ ದ್ದರು. ಮೇಲಾಧಿಕಾರಿಗಳು ಟೆಂಡ ರ್‌ಗೆ ಅನುಮತಿ ನೀಡಿದ್ದರು.
ಸರಕಾರದ ಮಾರ್ಗಸೂಚಿಯ ಪ್ರಕಾರ ಟೆಂಡರ್ ಕರೆಯಲಾಗಿದೆ. ಆದರೆ ಈ ಮೊದಲು ಇದ್ದ ಪುರಸಭೆ ಮುಖ್ಯಾಧಿಕಾರಿಗಳು ಸದಸ್ಯರ ಗಮನಕ್ಕೆ ತರದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಕಾರಣ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ ಮಂಗಳವಾರ ಸಾರ್ವಜನಿಕರ, ರಸ್ತೆ ಅಗಲೀಕರಣದಲ್ಲಿ ಮಳಿಗೆ ಕಳೆದು ಕೊಂಡವರ ಮತ್ತು ಪುರಸಭೆ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ನಿರ್ಣಯಿಸುವುದಾಗಿ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಉಪಸ್ಥಿತರಿದ್ದರು. ಪುರಸಭೆ ಸದಸ್ಯರಾದ ಸೈಪನ್ ಪವಾರ, ತಿಪ್ಪಣ್ಣ ಉಟಗಿ, ಜಯ ರಾಮ ರಾಠೋಡ, ಯಲ್ಲಪ್ಪ ಹದರಿ, ಪಿಂಟು ಪವಾರ, ವಿಜಯ ಮೂರ ಮನ್, ವ್ಯಾಪಾರಸ್ಥರಾದ ಚಿತ್ತು ಧನಶೆಟ್ಟಿ, ಮಂಜು ದೇವರ, ಅಶೋಕ ಅಕಲಾದಿ, ಮಚೇಂದ್ರ ಕದಮ್, ಅಪ್ಪು ಪವಾರ, ಶಿವಾನಂದ ಖೇಡಗಿ, ಚಂದನ ಧನಪಾಲ ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!