
ಉದಯವಾಹಿನಿ ನಾಗಮಂಗಲ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ರೂಪಗೊಂಡಿರುವ ಪ್ರತಿಭಾ ಕಾರಂಜಿಯ ಕಾರ್ಯಕ್ರಮ ಮುಖ್ಯ ಉದ್ದೇಶವಾಗಿದೆ ಎಂದು ಚಂದಗಾಲು ಮುಖ್ಯ ಶಿಕ್ಷಕರಾದ ಜಯಶೀಲ ರವರು ತಿಳಿಸಿದರು.ಅವರು ನಾಗಮಂಗಲ ತಾಲೂಕಿನ ದೇವಲಾಪುರ ಸಮೀಪವಿರುವ ಬಸರಾಳಿಗೆ ಸೇರಿರುವ ಶಿವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜನೆ ಮಾಡಿದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಧಾನ ಭಾಷಣ ಮಾತನಾಡಿದರು.ಗ್ರಾಮೀಣ ಮಕ್ಕಳಲ್ಲಿರುವ ಅ ಡಗಿರುವ ಕಲೆಯ ಪ್ರತಿಭೆಗಳ ಸೊಗಡು ಪಠ್ಯದ ಚಟುವಟಿಕೆಗಳನ್ನು ಹೊರತುಪಡಿಸಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮದೇ ಆದ ಕಲಾ ಪ್ರೌಢಿಮೆ ಬೆಳೆಸಿಕೊಂಡಿದ್ದು ಸೂಕ್ತ ವೇದಿಕೆಗಳು ಸಿಗದೇ ಕಾರಣ ಮಕ್ಕಳೇ ಗುನುಗುವುದು ಸರ್ವೇಸಾಮಾನ್ಯವಾಗಿದ್ದು ಇಂತಹ ಕಲಾ ಪ್ರೌಢಿಮೆ ಚಿಲುಮೆಗಳನ್ನ ಗುರುತಿಸಿ ಪ್ರತಿಭಾ ಕಾರಂಜಿಯ ವೇದಿಕೆ ಸೂಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟರು.ಪ್ರತಿಭೆ ಹಾಗೂ ಪಠ್ಯ ಮಕ್ಕಳು ಎರಡರಲ್ಲೂ ಸಮಾನಾಂತರದಲ್ಲಿ ವಾಸಂಗದ ಅವಧಿಯಲ್ಲಿ ತೊಡಗಿಸಿಕೊಂಡಿದ್ದು ಅವರ ಪ್ರತಿಭೆಗಳಿಗೆ ತಕ್ಕಂತೆ ಕಾರ್ಯಕ್ರಮಗಳಿದ್ದು ಇಂತಹ ಪ್ರತಿಭೆಗಳ ಕಾರಂಜಿಗಳನ್ನ ಗುರುತಿಸಿ ರಾಜ್ಯಮಟ್ಟದವರೆಗೂ ತಮ್ಮ ಪ್ರತಿಭೆಗಳನ್ನು ಗುರುತಿಸುವ ಅವಕಾಶ ಈ ಕಾರಂಜಿಯಿಂದ ಅನುಕೂಲವಾಗಿದೆ ಎಂದು ಪ್ರಾಸ್ತವಿಕ ನುಡಿಯಲ್ಲಿ ಶಿಕ್ಷಕರಾದ ಈರಪ್ಪನವರು ಮಾತನಾಡಿದರು. ಮಕ್ಕಳು ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಕಲಾ ಪ್ರದರ್ಶನ ಮಾಡುವಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್ಎಂ ರಮೇಶ್ ವಹಿಸಿದ್ದು ಸಭೆಯ ಅಧ್ಯಕ್ಷತೆಯನ್ನು ಶಿವಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಮಿಳಾ ರವರು ವಹಿಸಿದ್ದರು.ಸಮಾರಂಭದಲ್ಲಿ ಎಮ್. ಸಿ ಪುಟ್ಟಸ್ವಾಮಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಶ್ರೀಕಾಂತ್ ಉಮಾಶಂಕರ್ ಗ್ರಾಮದ ಮುಖಂಡರು ಗಣ್ಯರು ಹಾಜರಿದ್ದರು. ಕಾರ್ಯಕ್ರಮದ ದಾನಿಗಳು ರಾಕೇಶ್. ಮಾಯಣ್ಣ ರವರುಗಳು ಉಪಸ್ಥಿತರಿದ್ದು. ಮುಖ್ಯ ಶಿಕ್ಷಕರಾದ ವಸಂತ್ ಕುಮಾರ್ ಸ್ವಾಗತಿಸಿದರು
