ಉದಯವಾಹಿನಿ ಮಸ್ಕಿ:  ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕನ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಚಾರ್ಯ ಲಕ್ಷ್ಮಣ ಕರ್ಲಿ ಹೇಳಿದರು. ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮಕ್ಕೆ ಭಾಗಿಯಾಗಿ ಮಾತನಾಡಿದ ಅವರು, ಉತ್ತಮ ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ದೇಶದ ಅಭ್ಯುದಯಕ್ಕೆಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಇಡೀ ದೇಶ ತಮ್ಮ ಮೇಲೆ ಬಹಳಷ್ಟು ನಿರೀಕ್ಷೆಯನ್ನಿಟ್ಟಿದ್ದು ತಮ್ಮ ಕಾರ್ಯ ವೈಖರಿಯನ್ನು ಅವಲೋಕಿಸುತ್ತಿದೆ ಗುರುವಿನ ಸ್ಥಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಿ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಪಿ.ರಾಮು ಮಾತನಾಡಿ,  ಸಂಸ್ಥೆಯ ಕಾರ್ಯದರ್ಶಿ ಪಿ ರಾಮು ಮಾತನಾಡಿ  ತಂತ್ರಜ್ಞಾನ ಬೆಳೆದಂತೆಲ್ಲ ಮಕ್ಕಳ ಮನಸ್ಸು ವಿಚಲಿತಗೊಂಡು ಮಲೀನವಾಗುತ್ತಿರುವುದು ದುರಂತ ವಿಷಯ ಇಂತಹ ಸಂದರ್ಭದಲ್ಲಿ ಮಕ್ಕಳನ್ನು ತಿದ್ದಿ ದೇಶದ ಶಕ್ತಿಯನ್ನಾಗಿಸಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯೋನ್ಮುಖರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕ ಹುಸೇನ್ ಬಾಷಾ,ಶರಣಬಸವ ಗೋನಾಳ, ಎಮ್ ಡಿ ಯುಸುಪ್,ಪರಮೇಶ ಸೇರಿದಂತೆ ಇನ್ನಿತರಿದ್ದರು

Leave a Reply

Your email address will not be published. Required fields are marked *

error: Content is protected !!