ಉದಯವಾಹಿನಿ, ಚಿತ್ರದುರ್ಗ: ರೋಗಿಗಳ ಸುರಕ್ಷತೆ ಬಗ್ಗೆ  ಜಾಗತಿಕ ಜಾಗೃತಿ ಮೂಡಿಸಲು ಮತ್ತು ರೋಗಿಗಳಿಗೆ ಹಾನಿಯನ್ನು ಕಡಿಮೆ ಮಾಡಲು ಎಲ್ಲಾ ದೇಶಗಳಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 17ರಂದು ಆಚರಿಸಲಾಗುವುದು ಎಂದು ಡಾಕ್ಟರ್ ರೇಣುಪ್ರಸಾದ್ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಆರೋಗ್ಯ ರಕ್ಷಣೆ ನೀಡುವ ಸಮಯದಲ್ಲಿ ರೋಗಿಗಳಿಗೆ ಸಂಭವಿಸುವ ಅಪಾಯಗಳು, ದೋಷ ಮತ್ತು ಹಾನಿಯನ್ನು ತಡೆಗಟ್ಟುವುದು ಹಾಗೂ ಕಡಿಮೆ ಮಾಡುವುದು ಮುಖ್ಯ ಧ್ಯಯವಾಗಿದೆ ಎಂದರು.ಡಾಕ್ಟರ್ ಜಯಮ್ಮ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಮಾತನಾಡಿ, ತಂಡದ ಕೆಲಸದ ಮೂಲಕ ರೋಗಿಗಳ ಆರೈಕೆಯಲ್ಲಿ ಪಾರದರ್ಶಕತೆಯನ್ನು ಬೆಂಬಲಿಸಿ, ರೋಗಿಗಳ ಹಿತಾಸಕ್ತಿ ಕಾಪಾಡಲು ಸಿಬ್ಬಂದಿ ಕೈಜೋಡಿಸಬೇಕೆಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ. ವೈದ್ಯರು ಮತ್ತು ಸಿಬ್ಬಂದಿಯವರೊಂದಿಗೆ ಪ್ರತಿಜ್ಞಾವಿಧಿ ಭೋದಿಸಿದರು.

Leave a Reply

Your email address will not be published. Required fields are marked *

error: Content is protected !!