ಉದಯವಾಹಿನಿ,ಸೈದಾಪುರ:ಗುಣಾತ್ಮಕ ಶಿಕ್ಷಣದಿಂದ ಮಾತ್ರ ಉತ್ತಮ ಸಾಧನೆ ನಮ್ಮದಾಗುತ್ತದೆ. ಈ ದಿಸೆಯಲ್ಲಿ ನಾವು ಪ್ರಯತ್ನ ಮಾಡಬೇಕು ಎಂದು ನೂತನ ಬಿಇಓ ಬಸವರಾಜಶೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಗೆ ಹಠಾತ ಭೇಟಿ ನೀಡಿ ಮಾತನಾಡಿದರು. ಗಡಿ ಗ್ರಾಮೀಣ ಭಾಗದಲ್ಲಿ ವಿವಿಧ ಸಮಸ್ಯೆಗಳ ಮಧ್ಯ ಸಂಸ್ಥೆ ಉತ್ತಮ ಕಾರ್ಯ ಮಾಡುತ್ತಿದೆ. ಇದಕ್ಕೆ ಸೇವಾ ಮನೋಭಾನವೆಯ ಗುಣ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನೂ ಹೆಚ್ಚಿನ ಸಾಧನೆ ನಿಮ್ಮದಾಗಲಿ. ಇದಕ್ಕಾಗಿ ದಾಖಲಾತಿಗೆ ತಕ್ಕಂತೆ ಹಾಜರಾತಿಗೆ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ಶಾಲಾ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಸರಕಾರಿ ಪ್ರೌಢ ಶಾಲೆಯ ಮುಖ್ಯಗುರು ಈರಣ್ಣ ಯರಗಟ್ಟಿ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಶಿಕ್ಷಕರಾದ ಗೂಳಪ್ಪ.ಎಸ್.ಮಲ್ಹಾರ, ವಿಶ್ವನಾಥರೆಡ್ಡಿ ಕಣೇಕಲ, ಭೀಮಣ್ಣ, ಸತೀಶ ಪುರ್ಮಾ, ಶಿವಕುಮಾರ ಬಂಡಿ ಸೇರಿದಂತೆ ಇತರರಿದ್ದರು.
