ಉದಯವಾಹಿನಿ, ಹೈದರಾಬಾದ್: ಭಾರತ್ ಜೋಡೋ ಯಾತ್ರೆ -2 ಪರಿಗಣನೆಯಲ್ಲಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ದೇಶದ ಪೂರ್ವ ಭಾಗದಿಂದ ಪಶ್ಚಿಮಕ್ಕೆ ಜಾಥಾ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ಕೆಲ ಸದಸ್ಯರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಿಡಬ್ಲ್ಯೂಸಿ ಮೊದಲ ಸಭೆಯ ಬಳಿಕ ಮಾತನಾಡಿದ ಸಮಿತಿ ಸದಸ್ಯ ಪಿ ಚಿದಂಬರಂ, ‘ಭಾರತ್ ಜೋಡೋ ಯಾತ್ರೆ 2 ಆಯೋಜಿಸಲು ಸಮಿತಿಯ ಕೆಲ ಸದಸ್ಯರು ವಿನಂತಿಸಿದ್ದಾರೆ. ಆ ವಿಷಯವು ಪರಿಗಣನೆಯಲ್ಲಿದೆ’ ಎಂದಷ್ಟೇ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಳೆದ ವರ್ಷ ಸೆ. 7ರಿಂದ ಈ ವರ್ಷ ಜ.30ರವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜಾಥಾ ಕೈಗೊಂಡಿದ್ದರು.
