
ಉದಯವಾಹಿನಿ,ಚಿಂಚೋಳಿ: 9ವರ್ಷದಲ್ಲಿ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಮಾಡಿದ ಕೆಲಸಗಳು ದೇಶದ ಸೇವೆಯನ್ನು ಇಡಿ ವಿಶ್ವವೇ ಮೆಚ್ಚುತ್ತಿದೆ ಅಧಿಕಾರದಲ್ಲಿರುವಾಗ ಮಾಡುವ ಕೆಲಸ ಸದಾ ಅಮರವಾಗಿರುತ್ತದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಕೀಲರ ಸಭೆಯಲ್ಲಿ ಮಾತನಾಡಿದ ಅವರು,ಭಾರತ ದೇಶವು ವಿಶ್ವಕ್ಕೆ ಮಾದರಿಯಾಗಿದೆ. ಕುಟುಂಬ ನಿರ್ವಹಣೆ ಮಾಡಲು ಒಬ್ಬ ದಿಟ್ಟ ಗಟ್ಟಿತನವಾದ ಮನಸ್ಸುಳ್ಳವರು ಬೇಕು ಹಾಗೆ ದೇಶವನ್ನು ಮುನ್ನಡೆಸಲು ಹೋಗಲು ಒಬ್ಬ ಗಟ್ಟಿತನವಾದ ಹಾಗೂ ಧೈರ್ಯವಂತ ದಿಟ್ಟ ನಾಯಕ ನರೇಂದ್ರ ಮೋದಿಯವರು ಬೇಕು. ಮೋದಿ ಮೇಲೆ ದೇಶದ ಜನರು ವಿಶ್ವಾಸವಿಟ್ಟಿದ್ದಾರೆ ದೇಶದ ಜಿಡಿಪಿ 7.8ಏರಿಕೆಯಾಗಿದೆ,ದೇಶದಾದ್ಯಂತ 74 ವಿಮಾನ ನಿಲ್ದಾಣವಿದ್ದಿದ್ದು 104ಕ್ಕೆ ಏರಿಕೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಹಿಂದಿನ ಸರ್ಕಾರಗಳಿಗೆ ಹೊಲಿಸಿದರೆ ಮೋದಿಯವರು ಅದರ ನಾಲ್ಕು ಪಟ್ಟು ಹೆಚ್ಚು ಯೋಜನೆಗಳು ಸಿದ್ದಪಡಿಸಿ ಜನರಿಗೆ ಮುಟ್ಟಿಸುವಂತ ಕೆಲಸ ಮಾಡಿದ್ದಾರೆ ಎಂದರು. ವಕೀಲರ ಸಂಘದ ಅಧ್ಯಕ್ಷ ಸುದರ್ಶನ ಬಿರಾದಾರ ಮಾತನಾಡಿ ನ್ಯಾಯಾಲಯ ಕಟ್ಟಡದ ಹಾಗೂ ವಕೀಲರ ಸಂಘದ ಕಛೇರಿ ಹಾಗೂ ವಿಶ್ರಾಂತಿ ಕೋಣೆ ಕೊರತೆಯಿದೆ.
ಈಗಾಗಲೇ ನ್ಯಾಯಾಲಯ ಕಟ್ಟಡಕ್ಕೆ 17ಕೋಟಿಯ ಅಗತ್ಯವಿದ್ದು ಕ್ರೀಯಾಯೋಜನೆ ಸಿದ್ದವಾಗಿದ್ದು ಹಣದ ಕೊರತೆಯಿದೆ ತಾವು ಕೆಕೆಆರ್ ಡಿಬಿ ಮೂಲಕ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ಶ್ರೀಮಂತ ಕಟ್ಟಿಮನಿ ಸ್ವಾಗತಿಸಿದರು,ವಿಶ್ವನಾಥ ಬೆನಕಿನ ನಿರೂಪಿಸಿದರು,ಸೂರ್ಯಕಾಂತ ಚಿಂಚೋಳಿಕರ್ ವಂದಿಸಿದರು.
ಈ ಸಂದರ್ಭದಲ್ಲಿ ಗೌತಮ್ ವೈಜೀನಾಥ ಪಾಟೀಲ,ಮಾಣಿಕರಾವ,ಸಂಜುಕುಮಾರ ಮೇತ್ರಿ,ಜಗನ್ನಾಥ ಅಗ್ನಿಹೋತ್ರಿ,ಜಗನ್ನಾಥ ಗಂಜಗಿರಿ,ಚಂದ್ರಶೇಟ್ಟಿ ಜಾಧವ,ವಿಜಯಕುಮಾರ,ಇರ್ಫಾನ್ ಪಟೇಲ,ಹಣಮಂತ ಹಿರೇಮನಿ,ಶಶಿಕಾಂತ ಅಡಕಿ,ನೀಲಮ್ಮಾ,ರಾಜೇಂದ್ರ ವರ್ಮಾ,ದೀಲಿಪ್ ಚವ್ಹಾಣ,ನಂದಿಕುಮಾರ ಪಾಟೀಲ,ನೀಲಕಂಠ ರಾಠೋಡ್,ವೈಜೀನಾಥ ದಾದಿ,ನಾಗಭೂಷಣ ಹುಲಗೂಂಡಿ,ಸಂತೋಷ ಪಾಟೀಲ,ವೀರೇಂದ್ರ ಕೋರಿ,ಅರುಣ ಹೇಗ್ಡೆ,ಮುಖಂಡರಾದ ಕೆಎಂ ಬಾರಿ,ಸಂತೋಷ ಗಡಂತಿ,ಭೀಮಶೇಟ್ಟಿ ಮುರುಡಾ,ಅನೇಕರಿದ್ದರು.
