ಉದಯವಾಹಿನಿ,ಶಿಡ್ಲಘಟ್ಟ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ವಿಸರ್ಜನಾ ವೇಳೆಯಲ್ಲಿ ಅಹಿತಕರ ಘಟಕಗಳು ನಡೆಯದಂತೆ ಬುಧವಾರ ರೌಡಿಗಳ ಪಟ್ಟಿಯಲ್ಲಿನವರಿಗೆ ರೌಡಿ ಪೆರೇಡ್ ಮಾಡಲಾಯಿತು.ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ನಂದಕುಮಾರ್ ಅವರು ನಗರದ ಪೊಲೀಸ್ ಠಾಣಿ ಮುಂಭಾಗ ರೌಡಿಶೀಟರ್ ಗಳ ಪರೇಡ್ ನಡೆಸಿದರು.
ತಾಲ್ಲೂಕಿನ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ದೂರುಗಳ ಆಧಾರದ ಮೇಲೆ ಹಾಗೂ ಶಾಂತಿ ಭಂಗ ಮಾಡಿದ ವ್ಯಕ್ತಿಗಳನ್ನು ವಿಚಾರಣೆ ಮಾಡಿ ರೌಡಿಗಳ ಕಾರ್ಯ ಚಟುವಟಿಕೆ ವಿಚಾರಿಸಿ ನಂತರ ಒಳ್ಳೆಯ ನಡೆತೆಯಿಂದ ಮತ್ತು ಉತ್ತಮ ಮಾರ್ಗದಲ್ಲಿ ನಡೆದಲ್ಲಿ ನಗರ ಹಾಗೂ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಓಡಾಡಿಕೊಂಡು ಇರಬಹುದು. ಇಲ್ಲವಾದಲ್ಲಿ ನಮಗೆ ಏನು ಮಾಡಬೇಕೆಂದು ಗೊತ್ತಿದೆ. ಅನ್ಯ ಮಾರ್ಗದಲ್ಲಿ ನಡೆಯದೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಒಳ್ಳೆಯದು ಎಂದು ತಿಳಿಸಿದರು.
ರೌಡಿ ಶೀಟರ್ ಗಳು ಎಲ್ಲೇ ಗಲಭೆಯಾಗಲೀ ಮತ್ತು ಗಣೇಶ ವಿಸರ್ಜನೆ ವೇಳೆಯಲ್ಲಿ ಭಾಗಿಯಾಗಿದ್ದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡುವ ಜೊತೆಗೆ, ಅಪರಾಧ ಪ್ರಕರಣದಲ್ಲಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. – ನಂದಕುಮಾರ್ ಆರಕ್ಷಕ ವೃತ್ತ ನಿರೀಕ್ಷಕ
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್.ಐ ಎಂ ವೇಣುಗೋಪಾಲ್,ಗ್ರಾಮಾಂತರ ಠಾಣೆಯ ಪಿಎಸ್ ಐ ಸುನೀಲ್ ಕುಮಾರ್ ,ಅಪರಾಧ ವಿಭಾಗದ ಪಿಎಸ್ಸೈ ಪದ್ಮಾವತಮ್ಮ,ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಾಜೇಶ್ವರಿ ಹಾಗೂ ರೌಡಿ ಶೀಟರ್ ಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!