
ಉದಯವಾಹಿನಿ,ಶಿಡ್ಲಘಟ್ಟ: ಹಾಲು ಉತ್ಪಾದಕರ ಸಹಕಾರ ಸಂಘಗಳು ನಡೆಸುವ ಸಾಮಾನ್ಯ ಸಭೆಯಲ್ಲಿ ಪ್ರತಿ ಸದಸ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವದರ ಜೊತೆಗೆ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಸಲಹೆ, ಸೂಚನೆಗಳನ್ನು ನೀಡಬೇಕು, ಹಾಗೂ ಯುವಶಕ್ತಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚಾರ ಮಾಡಿ ಹೈನುಗಾರಿಕೆಯ ಮಹತ್ವವನ್ನು ತಿಳಿಸಿ ಹೆಚ್ಚು ಹಾಲು ಉತ್ಪಾದಕರನ್ನಾಗಿ ಮಾಡಬೇಕು ಎಂದು ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಬಿ.ಆರ್ ರವಿಕಿರಣ್ ತಿಳಿಸಿದರು.ತಾಲೂಕಿನ ಗೊರಮಡಗು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ರೈತರಿಗೆ ರಿಯಾಯಿತಿ ದರದಲ್ಲಿ ಮುಂದಿನ ತಿಂಗಳಲ್ಲಿ ಹಾಲು ಉತ್ಪಾದಕರಿಗೆ ಮಿಲ್ಕಿಂಗ್ ಮಷಿನ್ ಅನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು, ಗುಣಮಟ್ಟದ ಹಾಲು ಪರೀಕ್ಷಿಸಲು ಒಂದು ವಾರದೊಳಗೆ ಪ್ಯಾಟೋಮಿಟರ್ ನೀಡುತ್ತೇವೆ. ರೈತರಿಗೆ ಪ್ಯಾಟ್ ಮೂಲಕ ದರ ನಿಗದಿ ಪಡಿಸಲಾಗುವುದು, ಮತ್ತು 50 ಅಥವಾ-70% ರಿಯಾಯಿತಿ ಮೂಲಕ ಚಾರ್ಪ್ ಕಟರ್ ಹಾಗೂ ರಾಸುಗಳ ಸುರಕ್ಷತೆಗಾಗಿ ಮ್ಯಾಟಗಳನ್ನು ಮುಂದಿನ ದಿನಗಳಲ್ಲಿ ಸಹಕಾರ ಸಂಘದಿಂದ ನೀಡಲಾಗುವುದು ಎಂದು ವಿವರಿಸಿದರು. ಸಭೆಯಲ್ಲಿ ವಿಸ್ತರಣಾಧಿಕಾರಿಗಳಾದ ಗುಲಾಬ್ ಜಾನ್ ರವರು ಲೆಕ್ಕಪರಿಶೋಧನೆಯನ್ನು ಓದಿ ಖರ್ಚು ವೆಚ್ಚಗಳ ಮಾಹಿತಿ ನೀಡಿದರು. ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಗ್ರಾಮಸ್ಥರು ಕುಂದು ಕೊರತೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ತಾಲ್ಲೂಕಿನ ಗೊರಮಡಗು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಗ್ರಾಮದಲ್ಲಿ ಹೆಚ್ಚು ಹೆಚ್ಚು ಯುವಕರು ಬಂದು ಸಲಹೆ ಸೂಚನೆಗಳನ್ನು ನೀಡಿ ಹೈನುಗಾರಿಕೆ ಬಗ್ಗೆ ತಿಳಿದುಕೊಂಡು ಹಾಲು ಉತ್ಪಾದನೆ ಮಾಡಿ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. -ಮೈತ್ರಿ ಲೋಕೇಶ್,ಗ್ರಾಮಸ್ಥರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಜಿಎನ್ ಕೆಂಪರೆಡ್ಡಿ, ಕಾರ್ಯದರ್ಶಿ ದೇವರಾಜ್, ಮುಖಂಡ ರಾಮಾಂಜಿನಪ್ಪ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಶ್ರೀನಿವಾಸ್,ಮಾಜಿ ನಿರ್ದೇಶಕ ದೇವಿರಪ್ಪ, ನಾರಾಯಣಸ್ವಾಮಿ,ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್,ಡೀಶ್ ಮಂಜುನಾಥ್,ಗ್ರಾ ಸದಸ್ಯ ವೆಂಕಟರೋಣಪ್ಪ,ಗೋಪಾಲಗೌಡ, ಹಾಗೂ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರು ಉಪಸ್ಥಿತರಿದ್ದರು.
