
ಉದಯವಾಹಿನಿ ಸಿಂಧನೂರು:ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಹಾಗೂ ತಾಲೂಕಾಧ್ಯಕ್ಷ ಮರಿಯಣ್ಣ ಇವರ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂರಕ್ಷ ಸಮಿತಿ (ರಿ) ಸಿಂಧನೂರು ತಾಲೂಕ ಹಾಗೂ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಜಿಲ್ಲಾ ಉಪಾಧ್ಯಕ್ಷ ಹಾಗೂ ಸಿಂಧನೂರು ತಾಲೂಕಿನ ಅಧ್ಯಕ್ಷರ ಆದೇಶದ ಮೇರೆಗೆ ಸಿಂಧನೂರು ತಾಲೂಕಿನ ಉಪಾಧ್ಯಕ್ಷರಾಗಿ ತಿಮ್ಮಣ್ಣ ವಲ್ಕಂದಿನ್ನಿ ಹಾಗೂ ಹುಡಾ ಹೋಬಳಿ ಘಟಕದ ಅಧ್ಯಕ್ಷ ರಾಗಿ ಚಿನ್ನಪ್ಪ ಬಂಗಾರಿಕ್ಯಾಂಪ್ ಮತ್ತು ಉಪಾಧ್ಯಕ್ಷರನ್ನಾಗಿ ಮರಿಸ್ವಾಮಿ ಬಂಗಾರಿ ಕ್ಯಾಂಪ್ ಸಂಘಟನಾ ಕಾರ್ಯದರ್ಶಿಯಾಗಿ ಅರಳಪ್ಪ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಜವಳಗೇರಾ ಇವರು ಶೋಷಿತ ಸಮುದಾಯಗಳ ನಡುವೆ ದೌರ್ಜನ್ಯ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಇದ್ದು ಅವರಿಗೆ ಧೈರ್ಯ ತುಂಬುವ ಸಮೂಹ ಜವಾಬ್ದಾರಿ ಮತ್ತು ಕಳಕಳಿ ಹೊಂದಿದೆ ಮತ್ತು ಜನಸಾಮಾನ್ಯರ ಹಕ್ಕೋತ್ತಾಯಗಳಿಗಾಗಿ ಸ್ಪಂದಿಸಿ ಜನರ ನೋವಿಗೆ ಧ್ವನಿಯಾಗಿ ನಮ್ಮ ಸಂಘಟನೆ ಇಂದು ತಾಲೂಕು ಮಟ್ಟದಿದ ಜಿಲ್ಲಾ ಮಟ್ಟದವರೆಗೆ ಗುರುತಿಸಿಕೊಂಡು ಪ್ರಬಲವಾಗಿ ಹೊರಹೊಮ್ಮಿದೆ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದರು.ನಂತರ ಮಾತನಾಡಿದ ಸಿಂಧನೂರು ತಾಲೂಕಿನ ಅಧ್ಯಕ್ಷ ಮರಿಯಪ್ಪ ಚಿರು ಸಂಘಟನೆ ಕಟ್ಟಬೇಕಾದರೆ ಬಹಳಷ್ಟು ಜನರ ಶ್ರಮ ಹಾಗೂ ಸಂಘದ ಕಾರ್ಯಕರ್ತರ ಶ್ರಮದಿಂದ ನಮ್ಮ ಸಂಘಟನೆ ಉತ್ತುಂಗಕ್ಕೆ ಏರಿದೆ ಬದಲಾವಣೆಯಲ್ಲಿ ನೋವಿದೆ ಮೌಲ್ಯಗಳ ಸಂಘರ್ಷ ಗಳ ನಡುವೆ ಇಂದಲ್ಲ ನಾಳೆ ಬದಲಾಗುವಲ್ಲಿ ನೂತನ ಪದಾಧಿಕಾರಿಗಳ ಶ್ರಮ ತುಂಬಾ ಅವಶ್ಯಕತೆ ಇದೆ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ದಸಂಸ ಜಿಲ್ಲಾ ಗೌರವಾಧ್ಯಕ್ಷ ನಾಗೇಶ್ ವಲ್ಕoದಿನ್ನಿ, ಮಸ್ಕಿ ತಾಲೂಕು ಉಪಾಧ್ಯಕ್ಷರು ಆನಂದ, ನಾಗೇಶ್ ಎಚ್.ಎಸ್ ತಾಲೂಕು ಉಪಾಧ್ಯಕ್ಷರು ವಲ್ಕoದಿನ್ನಿ, ಮೌಲಪ್ಪ ಯಾಪಲಪರ್ವಿ, ಚನ್ನಬಸವ ಯಾಪಲಪರ್ವಿ, ಬಸವರಾಜ್ ಗುಬ್ಬಳ್ಳಿ ವಲ್ಕoದಿನ್ನಿ, ರವಿಕುಮಾರ ವಲ್ಕoದಿನ್ನಿ, ಮಲ್ಲಿಕಾರ್ಜುನ್ ಯಾಪಲಪರ್ವಿ, ರಾಘು, ಮಲ್ಲಯ್ಯ, ಅಮರೇಶ್ ಎಚ್, ಅಯ್ಯಪ್ಪ ದುಮುತಿ, ಇತರರು ಇದ್ದರು.
