
ಉದಯವಾಹಿನಿ ಸಿಂಧನೂರು. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗಬೇಕೆಂದು ಮೂರು ದಶಕಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ನಮ್ಮ ಮಹಿಳೆಯರಿಗೆ ಶೇಕಡಾ 33% ರಷ್ಟು ಲೋಕಸಭೆಯಲ್ಲಿ ಮಂಡನೆಯಾಗಿದ್ದು ಸ್ವಾಗತ. ಆದರೆ ಈ ಮೀಸಲಾತಿ ಕಾಂಗ್ರೆಸ್ ಪಕ್ಷದ ಕನಸಿನ ಕೂಸು ಎಂದು ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ನಾಗವೇಣಿ ಎಸ್ ಪಾಟೀಲ್ ತುರ್ವಿಹಾಳ ಹೇಳಿದರು.ಅವರು ಈ ಕುರಿತು ಪ್ರಕಟಣೆ ಹೊರಡಿಸಿ ಕೇಂದ್ರದಲ್ಲಿ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡ 33 % ರಷ್ಟು ಮೀಸಲಾತಿ ಮಂಡಿಸಿದಾಗ ಸಭೆಯಲ್ಲಿ ತ್ರಿವ ವ್ಯಕ್ತವಾಗಿತ್ತು. ಆದ್ದರಿಂದ ವಿಳಂಬವಾಗಿತ್ತು. ಅಂತೂ ಇಂತೂ ಮಹಿಳೆಯರಿಗೆ ಮೀಸಲಾತಿ ಬಂತು, ಇದಕ್ಕೆ ಹೃತ್ಪೂರ್ವಕ ಸ್ವಾಗತ ಎಂದು ತಿಳಿಸಿದ್ದಾರೆ. ಇಂದು ಮಂಡನೆಯಾದ ಮಹಿಳೆಯರಿಗೆ 33ರಷ್ಟು ಮೀಸಲಾತಿ ಪ್ರಕಾರ ಮುಂಬರುವ ಚುನಾವಣೆಯಲ್ಲಿ 66 ಜನ ಮಹಿಳೆಯರು ಶಾಸಕರಾಗಿ ವಿಧಾನಸೌಧಕ್ಕೆ ಕಾಲು ಇಡಲಿದ್ದಾರೆ ಎಂದು ಡಾ ನಾಗವೇಣಿ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದರು..
