ಉದಯವಾಹಿನಿ  ಸಿರುಗುಪ್ಪ : ತುಂಗಾಭದ್ರ ನದಿಪಾತ್ರದ ತಾಲೂಕಿನ ರುದ್ರಪಾದ, ಎಂ.ಸೂಗೂರು, ಮಣ್ಣೂರು ಗ್ರಾಮಗಳಲ್ಲಿ ಹಾಡಹಗಲೇ ಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದರೂ ಸಂಬ0ದಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಕಂಡಬ0ದಿತು.ಮರಳು ದಂಧೆಯನ್ನೇ ಕಾರ್ಯವನ್ನಾಗಿಸಿಕೊಂಡಿರುವ ಕೆಲವು ದಂಧೆಕೋರರು ಕಾರ್ಮಿಕರನ್ನು ಬಳಸಿಕೊಂಡು ನದಿಯಲ್ಲಿ ಮುಳುಗಿ ಕಬ್ಬಿಣದ ತೆಪ್ಪದ ಮೂಲಕ ಮರಳು ತಂದು ಒಂದೆಡೆ ಸಂಗ್ರಹಿಸಿಕೊAಡು ರಾತ್ರಿವೇಳೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಗ್ರಾಮಸ್ಥರು ನೀಡಿದ್ದರು.
ವರದಿ ತೆರಳಿದ ವರದಿಗಾರರಿಗೆ ಬೆದರಿಕೆ ಹಾಕಿದ್ದನ್ನೂ ಕೆಲವು ಪತ್ರಿಕೆಯಲ್ಲಿ ಬಿತ್ತರಿಸಲಾಗಿತ್ತು. ಈ ಬಗ್ಗೆ ಸಂಬ0ದಿಸಿದ ಅಧಿಕಾರಿಗಳಿಗೆ ವರ್ಷದ ಹಿಂದೆ ಮಾಹಿತಿ ನೀಡಿ ವರದಿ ಮಾಡಲಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಪೋಲೀಸ್ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಸಂಗ್ರಹಿಸಿದ್ದ ಮರಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ಆದರೆ ಮರಳು ಸಂಗ್ರಹಿಸಲು ಬಳಸುತ್ತಿರುವ ತೆಪ್ಪವನ್ನು ಅಲ್ಲಿಯೇ ಬಿಟ್ಟು ಹೋಗಿದ್ದರಿಂದ ಕೆಲವೇ ತಿಂಗಳುಗಳಲ್ಲಿ ಮತ್ತದೇ ಹಳೇ ಚಾಳಿ ಮುಂದುವರೆಸಿರುವ ಅಕ್ರಮ ಮರಳು ಸಾಗಾಣಿಕೆದಾರರು ರಾಜಾರೋಷವಾಗಿ ಮರಳು ಸಾಗಿಸುತ್ತಿದ್ದಾರೆ. ಮರಳು ಅಗತ್ಯವುಳ್ಳ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮರಳು ತುಂಬಿಕೊ0ಡು ಬಂದರೆ ಪ್ರಶ್ನಿಸುವ ಸಂಬ0ದಿಸಿದ ಕಂದಾಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೋಲೀಸ್ ಇಲಾಖೆಯವರು ಟ್ರಾö್ಯಕ್ಟರ್ ಮತ್ತು ತೆಪ್ಪದ ಮೂಲಕ ನಡೆಸುವ ಈ ದಂಧೆಯನ್ನು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜಧನದ ಶುಲ್ಕ ತುಂಬಿ ಟಿಪ್ಪರ್‌ಗಳಿಂದ ಸಾಗಿಸಲು ಈ ಹಿಂದೆ ತಾಲೂಕಿನ ಉಡೇಗೋಳ ಗ್ರಾಮದಲ್ಲಿ ಮರಳು ಕೇಂದ್ರಗಳಿದ್ದವು. ಈಗ ತಾಲೂಕಿನ ಗಡಿಭಾಗದ ಮಣ್ಣೂರು ಸಮೀಪದ ಗ್ರಾಮದಲ್ಲಿ ಮರಳು ಕೇಂದ್ರದಿ0ದ ಸರ್ಕಾರ ಅವಕಾಶ ನೀಡುತ್ತಿದೆ ಆದರೂ ಅಕ್ರಮ ಚಟುವಟಿಕೆಗೆ ಕಾರಣವೇನು? ಇನ್ನು ಮುಂದಾದರೂ ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿ ಸಂಬ0ದಿಸಿದವರಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬುದು ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!