ಉದಯವಾಹಿನಿ ಸಿರುಗುಪ್ಪ : ತಾಲೂಕಿನ ಸಿರಿಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಹರ್‌ಘರ್ ಜಲೋತ್ಸವ ಕಾರ್ಯಕ್ರಮದ ಬಗ್ಗೆ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷö್ಮಮ್ಮ, ಅವರಿಂದ ನಳಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಭಿವೃದ್ದಿ ಅಧಿಕಾರಿ ರಾಮಪ್ಪ ಮಾತನಾಡಿ ಸಾರ್ವಜನಿಕರಿಗೆ ಜಾನುವಾರುಗಳಿಗೆ ಕುಡಿಯಲು ಮತ್ತು ಬಳಕೆಗೆ ಶುದ್ದ ಕುಡಿಯುವ ನೀರು ಒದಗಿಸಲು ಸರ್ಕಾರದಿಂದ ಪಂಚಾಯಿತಿಗೆ ೬ಕೋಟಿ ೩೩ ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ೩೮೫೪ ಮನೆಗಳಿಗೆ ನಳ ಸಂಪರ್ಕದೊ0ದಿಗೆ ನೀರು ಪೂರೈಸಲಾಗುತ್ತಿದೆಂದರು.ಈ ವೇಳೆ ಗ್ರಾಮದ ಮುಖಂಡರಾದ ಬಿ.ನಾಗೇಂದ್ರ, ಹನುಮೇಶ, ಕುಮಾರ ಇನ್ನಿತರರು ಮಾತನಾಡಿ ಜಲಜೀವನ್ ಮಿಷನ್ ಅಡಿಯಲ್ಲಿ ಅರೆಬರೆ ಕಾಮಗಾರಿ ನಡೆದಿದೆ. ಆದ್ದರಿಂದ ಸಾರ್ವಜನಿಕ ವಲಯದಲ್ಲಿ ಉದ್ಘಾಟನೆ ಕಾರ್ಯ ಮಾಡದೇ ಪಂಚಾಯಿತಿ ಆವರಣದಲ್ಲಿ ಉದ್ಘಾಟನೆ ಮಾಡಲಾಗಿದೆ.ಈ ಯೋಜನೆಯಿಂದ ಬರೀ ಪಂಚಾಯಿತಿಗಷ್ಟೇ ನೀರು ಬಂದಿದೆ. ಆದರೆ ಯೋಜನೆಯಡಿ ಅರ್ಹವಾದ ಮನೆಗಳಿಗೆ ನೀರು ಬಂದಿಲ್ಲವೆAದು, ಇನ್ನೂ ಹಲವೆಡೆ ಬೇಕಾಬಿಟ್ಟಿಯಾಗಿ ನೆಲದ ಮೇಲ್ಭಾಗದಲ್ಲಿ ಅಗೆದು ಪೈಪ್ ಸಂಪರ್ಕ ನೀಡಲಾಗಿದೆ.ರೈತರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ತಮ್ಮ ಸರಕುಗಳನ್ನು ತುಂಬಿಕೊ0ಡು ಬಂದ ವಾಹನಗಳು ವಾರ್ಡ್ಗಳಲ್ಲಿನ ಮನೆಗಳಿಗೆ ತೆರಳಿದಲ್ಲಿ ಪೈಪ್ ಒಡೆದು ಸೋರುವ ಸ್ಥಿತಿಯಲ್ಲಿವೆ. ಈ ಯೋಜನೆ ಸಂಪೂರ್ಣವಾದ ಮೇಲೆ ಈ ಕಾರ್ಯಕ್ರಮ ಹಮ್ಮಿಕೊಂಡು ಅನುಮೋದನೆಗೆ ಚಾಲನೆ ನೀಡಬಹುದಾಗಿತ್ತೆಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಕೆ ಸಹಾಯಕ ಅಭಿಯಂತರ ರವೀಂದ್ರನಾಥ, ಪಂಚಾಯತ್ ರಾಜ್ ಇಲಾಖೆ ಕಿರಿಯ ಅಭಿಯಂತರ ಕಾಂತರಾಜ್, ಗುತ್ತಿಗೆದಾರ ಶ್ರೀನಿವಾಸ ಗ್ರಾ.ಪಂ.ಸದಸ್ಯರು ಸಾರ್ವಜನಿಕರು ಇದ್ದರು.
