ಉದಯವಾಹಿನಿ ಮುದ್ದೇಬಿಹಾಳ ; ನಮ್ಮ ಕರ್ನಾಟಕ ರಾಜ್ಯದಲ್ಲಿ ರೈತರು ಬೆಳೆಯುವ ಉತ್ಪನ್ನಗಳನ್ನು ಉತ್ಪಾದನೆಯನ್ನು ಖರೀದಿಸುವ ಕೇಂದವೆಂದರೆ‌ ಅದು ಮುದ್ದೇಬಿಹಾಳ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವಾಗಿದೆ‌ ಎಂದು ಸಹಕಾರಿ ಸಂಘಗಳ ನಿವೃತ್ತ ಉಪ ನಿಬಂಧಕ ಪಿ ಬಿ ಕಾಳಗಿ ಹೇಳಿದರು ಅವರು ಬುಧವಾರ ಪಟ್ಟಣದ ಎಪಿಎಂಸಿಯ ತಾಲೂಕ ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘದ 66 ನೇ‌ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ರೈತರ ಉತ್ಪಾದನೆ ರೈತನ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರ ವಿಶ್ವಾಸಾರ್ಹತೆಗೆ ಸಂಘ ಪಾತ್ರವಾಗಿದೆ ಕಳೆದ 65 ವರ್ಷಗಳಿಂದ‌‌‌‌‌ ಅನೇಕ‌‌‌‌ ಏರಿಳಿತಗಳು ಕಂಡಿರುವ ಸಂಘ ಪ್ರಗತಿಯಲ್ಲಿದೆ‌ ಎಂದರು ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ 65 ವರ್ಷಗಳಿಂದ ರೈತರಿಗೆ ಅತಿಹೆಚ್ಚು ವಿಶ್ವಾಸಕ್ಕೆ ತಾಲೂಕ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಪಾತ್ರವಾಗಿದೆ ರೈತರ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಗತವೈಭವ ಮರುಕಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರುಪ್ರಾಸ್ತಾವಿಕವಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರಭಾರಿ ವ್ಯವಸ್ಥಾಪಕ ವ್ಜಿ.ಎಸ್ ಉತ್ನಾಳ ಮಾತನಾಡಿ ಮುದ್ದೇಬಿಹಾಳ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘ ತಾಲೂಕಿನ ರೈತರ ಮತ್ತು ಗ್ರಾಹಕರಿಗೆ 66 ವರ್ಷಗಳಿಂದ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ ಮತ್ತು ರೈತರು ಬೆಳೆದ ಒಕ್ಕಲುತನ ಹುಟ್ಟುವಳಿ ಮಾರಾಟ ಮೂಡಿಸುವಲ್ಲಿ ಮುತುವರ್ಜಿವಹಿಸಿ ಕಾರ್ಯನಿರ್ವಹಿಸುತ್ತಿದೆ,ಮುಖ್ಯ ಕಾರ್ಯಾಲಯದ ಜೊತೆಗೆ ತಾಳಿಕೋಟಿ, ನಾಲತವಾಡ ಶಾಖೆಗಳಲ್ಲಿ ಸಹ ಸರಕಾರ ನೀಡುವ ಜೀವನಾವಾಶ್ಯಕ ವಸ್ತುಗಳನ್ನು ಪ್ರತಿ ತಿಂಗಳು ವಿತರಣೆ ಮಾಡ್ತಾ ಬಂದಿದೆ ಈ ವರ್ಷದಲ್ಲಿ ಒಟ್ಟು 4.15.827 ರೂ ಶಿಲ್ಕು ಮಾಲು ಇದೆ ಎಂದು ವಿವರಿಸಿದರು ವಾರ್ಷಿಕ ವರದಿವಾಚನ ಸಹಾಯಕ ವ್ಯವಸ್ಥಾಪಕ ಜಿ.ಎಸ್ ಕೋನರೆಡ್ಡಿ ಮಾಡಿದರು. ಈ ವೇಳೆ , ಮುದ್ದೇಬಿಹಾಳ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ್ ಓಸ್ವಾಲ್, ಸಂಘದ ಅಧ್ಯಕ್ಷ ಎಂ.ಎಸ್ ಮೇಟಿ, ಉಪಾಧ್ಯಕ್ಷ ಜಿ.ಬಿ ಹತ್ತೂರ,ನಿರ್ದೇಶಕರಾದ ಎಸ್ ಬಿ ಹಿಪ್ಪರಗಿ, ಸಿ.ಎಂ ಸೀತಮನಿ,ಪಿ ಪಿ ಯಾಳವಾರ, ಎಂ ಕೆ ಮುತ್ತಣ್ಣನವರ,ಎಸ್ ಎಸ್ ಮಾಲಗತ್ತಿ,ಸಿ.ಎಸ್ ಲಕ್ಕುಂಡಿ,ಎಂ.ಎಸ್ ಸರಶೆಟ್ಟಿ,ಸಿಬ್ಬಂದಿಗಳಾದ ಎಂ.ಎಂ ಪಾಟೀಲ್, ಶ್ರೀಮತಿ ಎಸ್ ಎಂ ಚೌಧರಿ,ತಾಳಿಕೋಟಿಯ ಸಹಾಯಕ ವ್ಯವಸ್ಥಾಪಕ ಬಿ.ಎಂ ಬಿರಾದಾರ, ನಾಲತವಾಡ ಶಾಖೆಯ ಸಹಾಯಕ ವ್ಯವಸ್ಥಾಪಕ ಎಸ್ ಬಿ ಚಿನಿವಾರ,ಹಾಗೂ ಎಸ್ ಜಿ ಕೂಳ್ಳಿ‌ ಸೇರಿದಂತೆ ಸಂಘದ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!