
ಉದಯವಾಹಿನಿ,ತಾಳಿಕೋಟಿ: ಸಹಕಾರ ಸಂಘಗಳು ಬೆಳೆದು ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಸಂಘದ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದು ತುಂಬಗಿ ಪಿಕೆಪಿಎಸ್ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಎಸ್. ಹರನಾಳ ಹೇಳಿದರು. ಗುರುವಾರ ತಾಲೂಕಿನ ಹರನಾಳ ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ 2022 -23ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಹಕಾರ ಸಂಘವನ್ನು ಸ್ಥಾಪಿಸಿ ಬೆಳೆಸುವಲ್ಲಿ ಇದರ ಸಂಸ್ಥಾಪಕ ಸದಸ್ಯರ ಶ್ರಮ ಬಹಳವಿದೆ ಗ್ರಾಮೀಣ ಭಾಗದ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಂಘವು ಪ್ರಯತ್ನಿಸುತ್ತದೆ ಇದು ಸಾಧ್ಯವಾಗಬೇಕಾದರೆ ಸಂಘದ ಸದಸ್ಯರು ತಮ್ಮ ಉಳಿತಾಯದ ಹಣವನ್ನು ಸಂಘದಲ್ಲಿ ಠೇವಣಿ ರೂಪದಲ್ಲಿ ಇಡಲು ಪ್ರಯತ್ನಿಸಬೇಕು ಇದರಿಂದ ಸಾಲವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಇಲ್ಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಡಿ. ಅಂಗಡಿ ತಮ್ಮ ವಾರ್ಷಿಕ ವರದಿಯಲ್ಲಿ ಸಂಘ ಒಟ್ಟು ಸದಸ್ಯರನ್ನು ಹೊಂದಿದ್ದು ಇದರಲ್ಲಿ 826 ಸಾಲಗಾರ ಸದಸ್ಯರಿದ್ದಾರೆ ಸಂಘದ ಶೇರು ಬಂಡವಾಳ 51.89 ಲಕ್ಷ ಇದ್ದು 428.88 ಬೆಳೆ ಸಾಲ ವಿತರಿಸಲಾಗಿದೆ ಪ್ರಶಕ್ತ ವರ್ಷದಲ್ಲಿ ಸಂಘವು3.75 ಲಕ್ಷ ನಿವಳ ಲಾಭ ಗಳಿಸಿದೆ ಎಂದು ಹೇಳಿದರು. ಸಂಘದ ಸದಸ್ಯ ದಿವಂಗತ ಮಹಾದೇವಪ್ಪ ನಡಕೂರ್ ಅವರಿಗೆ ಒಂದು ನಿಮಿಷದ ಮೌನ ಆಚರಿಸಿ ಸಂತಾಪವನ್ನು ವ್ಯಕ್ತಪಡಿಸಲಾಯಿತು. ಈ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಡಿಕೆ ಘತ್ತರಗಿ ಗಣ್ಯರಾದ ಸಾಹೇಬ್ ಪಟೇಲ್ ಮೊಕಾಶಿ. ಶಿವಯ್ಯ ಹಿರೇಮಠ ಸಂಗಪ್ಪ ಶಳ್ಳಗಿ ಯಮನಪ್ಪ ಅಂಬಳನೂರ್ ತಿಪ್ಪಣ್ಣ ಪೂಜಾರಿ ಗುರಣ್ಣ ಗಬಸಾವಳಗಿ ನಾಗೇಶ್ ನಡ್ಕೂರ್ ಗಂಗಾಧರ್ ಬಿರಾದಾರ್ ನಿರ್ದೇಶಕರಾದ ಬಿ ಎಂ ಗುಡ್ನಾಳ ಎನ್ಎಸ್ ನಾಗೂರ್ ಎಸ್ ಹೆಚ್ ಪೂಜಾರಿ ಎಂ ಜೆ ಬಿರಾದರ್ ಬಿ ಎನ್ ಬಿರಾದರ್ ಎಸ್ ಬಿ ಬೂದಿಹಾಳ ಎಂಸಿ ಮೂಕಿಹಾಳ ಇದ್ದರು. ದೇವಪ್ಪ ಗುಡಗುಂಟಿ ತಿರುಪಿಸಿದರು ಕೆ .ಡಿ. ಅಂಗಡಿ ಕೊನೆಯಲ್ಲಿ ವಂದಿಸಿದರು.
