ಉದಯವಾಹಿನಿ ಕುಶಾಲನಗರ:- ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ  ರೈತ  ಸಹಕಾರ ಸಂಘಕ್ಕೆ   ಕೊಡಗು  ಜಿಲ್ಲಾ   ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಇವರ ವತಿಯಿಂದ ವರ್ಷಂಪ್ರತಿ ಯಂತೆ ಈ ಸಾಲಿನಲ್ಲಿ ನೀಡುವ ತಾಲ್ಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ರೈತ ಸಹಕಾರ ಸಂಘ ಪಡೆದುಕೊಂಡಿದೆ. ಜಿಲ್ಲಾ  ಸಹಕಾರ ಕೇಂದ್ರ ಬ್ಯಾಂಕ್ ನ  ಮಾನದಂಡದ ಅಧಾರದ ಮೇಲೆ   ಸಹಕಾರ ಸಂಘಗಳ  ನಿಯಮಾವಳಿ ಅನುಗುಣವಾಗಿ  ಹೂಡಿಕೆಯ ಬಂಡವಾಳ,  ಸಂಘದ ಸದಸ್ಯತ್ವ ಹೆಚ್ಚಳಿಕೆ, ಎರಡೂ ವರ್ಷಗಳ   ವ್ಯವಹಾರಗಳ ಆದಾಯ,  ಸಂಘದ ಶ್ರೇಣಿಯ ಅಂಶ,  ಸದಸ್ಯರ ಠೇವಣಿಯ ಸಂಗ್ರಹದ ಮಟ್ಟ, ಸುಸ್ಧಿ ಸಾಲ ವಸೂಲಾತಿ, ಲಾಭ ನಷ್ಟ  ಪರಿಗಣನೆ ಸೇರಿದಂತೆ ವಾರ್ಷಿಕ ವ್ಯವಹಾರ ಲಾಭಾಂಶಗಳ  ಅಂಶಗಳನ್ನು ಅಧಾರಿತವಾಗಿ ಈ ಸಾಲಿನಲ್ಲಿ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಸಹಕಾರ ಸಂಘಕ್ಕೆ      ತಾಲ್ಲೂಕು ಮಟ್ಟ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಅಧ್ಯಕ್ಷ ಕೆ, ಕೆ, ಹೇಮಂತ್ ಕುಮಾರ್ ಮಾಹಿತಿಯನ್ನು ನೀಡಿರುತ್ತಾರೆ. ಪ್ರಶಸ್ತಿಯನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ  ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಬ್ಯಾಂಡ್ ಗಣಪತಿ ನವರು ವಿತರಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!