ಉದಯವಾಹಿನಿ ಇಂಡಿ :  ತಾಲೂಕಿನ ಝಳಕಿ ಗ್ರಾಮದಲ್ಲಿ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಭತಗುಣಕಿ 75ನೇ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ನಿ, ಭತಗುಣಕಿ 75ನೇ ವಾರ್ಷಿಕ ಸರ್ವ ಸಾಧರಣ ಮಹಾಸಭೆಯನ್ನು ಸಂಬಾಜಿ ಸಿದ್ದೋಬಾ ಮಿಸಾಳೆ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಯಿತು.ನಮ್ಮ ಸಂಘವು ರೈತರಪರ ಸಂಘವಾಗಿದ್ದು, ಎಲ್ಲ ರೈತರೆ ನಮ್ಮ ಶಕ್ತಿ, ರೈತರ ಪರವಾಗಿ ನಮ್ಮ ಸಂಘದಿoದ ಹಸುಗಳ ವಿಮೇಯನ್ನು ಉಚಿತವಾಗಿ ಮಾಡಿಸಲಾಗಿದೆ, ಮತ್ತು ರೈತರಿಗೆ ಸಂಘದ ಲಾಭಾಂಶದಲಿ ಹಾಲಿನ ದರದಲ್ಲಿ ಹೆಚ್ಚಿನ ಮೊತ್ತವನ್ನು ನೀಡಲಾಗಿದೆ ಮತ್ತು ಕೃಷಿ ಪತ್ತಿನ ಸದಸ್ಯರಿಗೆ 10% ಶೇರ ಡಿವೆಡೆಂಡ ನಿಡಲಾಗುವುದು ಎಂದು ಈ ಸಂದರ್ಬದಲ್ಲಿ ಕೃಷಿ ಪತ್ತಿನ ಮತ್ತು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸಂಬಾಜಿ ಮಿಸಾಳೆ ಮಾತನಾಡಿದರು.
1138 ರೈತರಿಗೆ ಸಾಲ ಕೊಡಲಾಗಿದೆ, ನಮ್ಮ ಸಂಘ ಲಾಭಾಂಶದಲ್ಲಿದೆ, 2023ನೇ ಸಾಲಿನ ವರೇಗು ಲಾಭಾಂಶ ಮತ್ತು ಸಾಲಗಳ ವಿವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಮ್.ಡಿ.ಬಿರಾದಾರ ಮತ್ತು ಹಾಲು ಉತ್ಪಾದಕ ಸಂಘದ ಪ್ರಗತಿ ಪತ್ರಿಕೆಯನ್ನು ಶಿಭಿರಾಧಿಕಾರಿಗಳು ಎಸ್.ಎನ್.ತೆಗ್ಗಿ ಸೆಯಲ್ಲಿ ಬಹಿರಂಗ ಪಡಿಸಿದರು.ಈ ಸಂದರ್ಬದಲ್ಲಿ ಅತಿ ಹೆಚ್ಚು ಹಾಲನ್ನು ಸರಬರಾಜು ಮಾಡಿದ ರೈತರಿಗೆ, ಉತ್ತಮ ರೈತರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು. ಬಸವರಾಜ ಹಳಕೆ, ಅಪ್ಪಾಸಾಹೇಬ ಪವಾರ, ಶಿವಪುತ್ರ ಜೇವರಗಿ, ಗಂಗಾಧರ ಘಾಟಗೆ, ಶಿವಾಜಿ ಶಿಂಧೆ, ದಶರಥ ಘಾಟಗೆ, ರಹೀಮಸಾಬ ಬಾಗವಾನ, ಬಸವರಾಜ ವಾಗಮೋರೆ, ಲಲಿತಾ ಜಾಧವ, ನಾಗುಬಾಯಿ ಖರಾಡೆ, ಬಿ.ಎಮ್.ಕೋರೆ, ಎಸ್.ಎನ್.ಹಾದಿಮನಿ, ರಣಜಿತ ಬಾಬರ, ಎಮ್,ಎನ್,ಜುಲ್ಫಿ, ರುಕ್ಮುದ್ದಿನ ತದ್ದೆವಾಡಿ,ಅಪ್ಪಾಸಾಬ ಹಾವಿನಾಳ, ಶಿವಪುತ್ರ ಜೇವರಗಿ, ಅಫೀಕ ಭಾಗವಾನ, ಮಹಾದೇವ ಪವಾರ, ಶ್ಯಾಮರಾಯ ಕಾಡೆ, ಧನಾಜಿ ಮಿಸಾಳೆ, ಮಹಾನಂದ ಪಾಟೀಲ, ಪಾರ್ವತಿ ಕುಂಬಾರ, ಅಪ್ಪಾಸಾಬ ನಾ ಪವಾರ, ರಾಮಪ್ಪ ಹತ್ತೂರ,  ವಿಠೋಬಾ ವಾಲಿಕಾರ, ಸಂಘದ ಎಲ್ಲ ಸಿಬ್ಬಂದಿ ವರ್ಗ, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!