ಉದಯವಾಹಿನಿ ,ಯಾದಗಿರಿ: ಗ್ರಾಮ ಪಂಚಾಯತಗಳಲ್ಲಿ ವೈಜ್ಞಾನಿಕ ವಿಧಾನಗಳ ಮೂಲಕ ತ್ಯಾಜ್ಯ ಸಂಗ್ರಹಣೆ-ಸಂಸ್ಕರಣೆ ಮಾಡಿ, ಸ್ವಚ್ಛ ಹಾಗೂ ಸುಂದರ ಗ್ರಾಮ ಮಾಡಲು ಗ್ರಾಮ ಪಂಚಾಯತಿ ಮಂಡಳಿ ಮುಂದೆ ಬರಬೇಕು.ಇದಕ್ಕೆ ಆಡಳಿತ ಮಂಡಳಿ ಅವರ ಸಹಕಾರ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕರಿ ಶ್ರೀಮತಿ ಗರಿಮಾ ಪನ್ವಾರ್ ಅವರು ಹೇಳಿದರು.ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಆಯೋಜಿಸಿರುವ ಜಿಲ್ಲೆಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣವಾಗಿರುವ ಆಯ್ದ ಗ್ರಾಮ ಪಂಚಾಯತಗಳಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಗಳು ಹಾಗೂ ತ್ಯಾಜ್ಯ ನಿರ್ವಹಣೆ ಮಾಡಲು ಒಡಂಬಡಿಕೆ ಮಾಡಿಕೊಂಡಿರುವ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಅಧ್ಯಕ್ಷರಿಗೆ ಆಯೋಜಿಸಿರುವ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಗ್ರಾಮ ಪಂಚಾಯತಗಳಿಗೆ ಸ್ವಚ್ಛವಾಹಿನಿ ವಾಹನ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿದಿನ ಪ್ರತಿ ಮನೆ- ಅಂಗಡಿ, ಹೋಟೆಲ್ ಮುಂತಾದ ತ್ಯಾಜ್ಯ ಉತ್ಪಾದನಾ ಸ್ಥಳಗಳಿಂದ ದಿನನಿತ್ಯ ತ್ಯಾಜ್ಯ ಸಂಗ್ರಹಿಸುವಂತೆ ವೇಳಾ ಪಟ್ಟಿ ಹಾಕಿ ಸ್ವಚ್ಛವಾಹಿನಿ ಮೂಲಕ ತ್ಯಾಜ್ಯ ಸಂಗ್ರಹಿಸಿ- ಸಂಸ್ಕರಣೆ ಮಾಡಲು ಎಲ್ಲಾ ಗ್ರಾಮ ಪಂಚಾಯತಗಳಲ್ಲಿನ ಅಧ್ಯಕ್ಷರು, ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಸ್ವಯಂವಾಗಿ ಮುಂದೆ ಬಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.ಗ್ರಾಮೀಣಾ ಅಭಿವೃಧ್ಧಿ & ಪಂಚಾಯತ ರಾಜ್, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ ಮಿಷನ್ ಹಂತ-2 ರ ವಿವಿಧ ಘಟಕಾಂಶಗಳಾದ ವೈಯಕ್ತಿಕ ಶೌಚಾಲಯ ಬಳಕೆ, ತ್ಯಾಜ್ಯ ವಿಲೇವಾರಿ, ಬೂದು ನೀರು ನಿರ್ವಹಣೆ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದ್ದು ಈ ಯೋಜನೆಯ ಘಟಕಾಂಶಗಳಿಂದ ಗ್ರಾಮದಲ್ಲಿ ಸ್ವಚ್ಛತೆಯ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿದೆ. ಎಂಬುದನ್ನು ಜಿಲ್ಲೆಯ ಕೊಳ್ಳೂರ ಎಮ್ ಗ್ರಾಮ ಪಂಚಾಯತಿಯಲ್ಲಿ ಮಾದರಿಯಾಗಿ ಮಾಡಲಾಗಿದೆ. ಮಲತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳ ಸಂಸ್ಕರಣೆ ಮಾಡಲು ತಾಲೂಕಿಗೆ ಒಂದರಂತೆ ಎಮ್.ಆರ್.ಎಫ್ ಘಟಕಗಳ ನಿರ್ಮಾಣಕ್ಕೆ ಬೇಕಾಗಿರುವ ಜಮೀನು ಗುರುತಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ಎಲ್ಲಾ ಘಟಕಾಂಶಗಳ ನಿರ್ಮಾಣಕ್ಕೆ ಅವಶ್ಯವಾಗಿರುವ ವಿವಿಧ ಯೋಜನೆಯ ಅನುದಾನವನ್ನು ಒಗ್ಗೂಡಿಸಿ ಅನುಷ್ಠಾನಕ್ಕಾಗಿ ಸಹಕರಿಸಿ ಮಾದರಿ ಗ್ರಾಮ ಪಂಚಾಯತ ಮಾಡಲು ಅವರು ತಿಳಿಸಿದರು.
ಸನ್ಮಾನ : ಕಳೆದ ವರ್ಷದಲ್ಲಿ ಜಿಲ್ಲೆಯಲ್ಲಿಯೇ ಉತ್ತಮವಾಗಿ ತ್ಯಾಜ್ಯ ನಿರ್ವಹಣೆ ಮಾಡಿದ ಶಹಾಪೂರ ತಾಲೂಕಿನ ಕೊಳ್ಳೂರ ಎಮ್ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿಯವರಿಗೆ ಸಹಾಸ್ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು.
 ಪ್ರತಿಜ್ಞಾ ವಿಧಿ ಬೋಧನೆ: ಮುಖ್ಯ ಯೋಜನಾಧಿಕಾರಿಗಳು ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿಯವರಾದ ಗುರುನಾಥ ಗೌಡಪ್ಪನೋರ್ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ವಚ್ಛತೆಯೇ ಸೇವೆಯ ಆಂದೋಲನದ ಕುರಿತು ಪ್ರತಿಜ್ಞಾ ವಿಧಿ ಭೊಧಿಸಿದರು.ಇದೇ ಸಹಾಯಕ ನಿರ್ದೇಶಕರು, ಸಹಾಸ್ ಸಂಸ್ಥೆಯ ವ್ಯವಸ್ಥಾಪಕರು, ಸ್ವಚ್ಛ ಭಾರತ ಮಿಷನ್ ಯೋಜನೆಯ ಸಮಾಲೋಚಕರು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ ಅಭಿವೃಧ್ಧಿ ಅಧಿಕರಿಗಳು, ಒಕ್ಕೂಟದ ಅಧ್ಯಕ್ಷರು, ಸಾಹಸ್ ಸಂಸ್ಥೆಯ ಸಿಬ್ಬಂಧಿಯವರು ಪಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!