ಉದಯವಾಹಿನಿ ತಾಳಿಕೋಟಿ: ಜನಸಲಿರುವ ಮಗು ಆರೋಗ್ಯವಂತವಾಗಿರಲು ಹಾಗೂ ಮಗುವಿನ ಅಪೌಷ್ಟಿಕತೆಯನ್ನು ದೂರಿಕರಿಸಲು ಗರ್ಭಿಣಿ ಮತ್ತು ಬಾಣತಿಯರು ಪೌಷ್ಟಿಕ ಆಹಾರ ಸೇವಿಸುವುದು ಅತ್ಯಗತ್ಯವಾಗಿದೆ ಎಂದು ಕೊಣ್ಣೂರು ವೈದ್ಯಾಧಿಕಾರಿ ಡಾ. ಶ್ರೀಶೈಲ್ ಹುಕ್ಕೇರಿ ತಿಳಿಸಿದರು. ತಾಲೂಕಿನ ಕೊಣ್ಣೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಮಾಸಾ ಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗರ್ಭಿಣಿಯರು ಸಮಯಕ್ಕೆ ಅನುಸಾರವಾಗಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಕೊಳ್ಳಬೇಕು. ಹಾಗೂ ಚುಚ್ಚುಮದ್ದು ಮತ್ತು ಚಿಕ್ಕ ಮಕ್ಕಳಿಗೆ ಲಸಿಕೆ ಹಾಕಿಸುವುದು ಅವಶ್ಯವಾಗಿದೆ ಆರೋಗ್ಯದ ಕುರಿತು ವಹಿಸುವ ನಿಷ್ಕಾಳಜಿ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೆ ಚೌಹಾಣ ಅವರು ಮಾತನಾಡಿ ಪ್ರತಿಯೊಬ್ಬ ಗರ್ಭಿಣಿಯರ ಮತ್ತು ಬಾಣತಿಯರಿಗೆ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವನೆಯ ಮಹತ್ವ ಮಗುವಿನ ಆರೈಕೆಯ ಮಾಹಿತಿ ನೀಡಿ ಅವರಲ್ಲಿ ಜಾಗೃತಿ ಮೂಡಿಸಲು ರಾಷ್ಟ್ರೀಯ ಪೋಷಣ ಮಾಸಾಚರಣೆಯನ್ನು ಆಚರಿಸಲಾಗುತ್ತದೆ ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ್ ಹಾಗೂ ಮುಖ್ಯ ಗುರುಗಳಾದ ಎನ್ ಎಸ್ ಪೂಜಾರಿ ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ಹಸಿರು ತರಕಾರಿ ಮತ್ತು ಮೊಳಕೆ ಕಾಳುಗಳ ಸೇವನೆ ಮಹತ್ವದ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಪಿಡಿಒ ಸುಜಾತ ಬಿರಾದರ್. ಅಧ್ಯಕ್ಷ ರಾದ ರೇಣುಕಾ ಮಾದರ್. ಉಪಾಧ್ಯಕ್ಷ ಸಾಹೇಬ್ ಲಾಲ್ ಟಕ್ಕಳಕಿ. ಸದಸ್ಯ ಸೋಮು ಹಡಲಗೇರಿ. ಮೇಲ್ವಿಚಾರಕಿ ಹಜೇರಿ. ವಲಯಮೇಲ್ವಿಚರಕಿ ಸಾವಿತ್ರಿ ಒಣ ಕ್ಯಾಳ. ಅಂಗನವಾಡಿ ಎಲ್ಲಾ ಕಾರ್ಯಕರ್ತರು ಮಕ್ಕಳ ತಾಯಂದಿರು ಹಾಗೂ ಗರ್ಭಿಣಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!