
ಉದಯವಾಹಿನಿ ಅಫಜಲಪುರ: ತಾಲೂಕಿನ ಅವರಾದ ಗ್ರಾಮದಲ್ಲಿ ಕನಕದಾಸರ ಮೂರ್ತಿ ಅನಾವರಣ ಹಾಗೂ ಕನಕದಾಸರ ಭವ್ಯ ಮೆರವಣಿಗೆ ಮತ್ತು ಧರ್ಮಸಭೆ ಬಹಳ ಅದ್ದೂರಿಯಾಗಿ ನಡೆಯಿತು. ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದರಾಮನಂದಪುರಿ ಮಹಾಸ್ವಾಮಿಗಳು ಮಾತನಾಡಿ ಸಮಾಜದ ಯುವಕರೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವನ್ನು ಕಲಿಯಬೇಕು ಯುವಕರು ದೊಡ್ಡ ಹುದ್ದೆಯಲ್ಲಿ ಸೇರಿ ನಮ್ಮ ಸಮಾಜದ ಹೆಸರು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳಸಬೇಕು ಎಂಬುದೇ ನನ್ನ ಆಶಯ ಈ ಗ್ರಾಮದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೀರಿ ಕನಕದಾಸರ ಮೂರ್ತಿಯು ಕೂಡ ಅನಾವರಣ ಮಾಡಿದಿರಿ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಮಾಡಿದ್ದೀರಿ ಎಲ್ಲರಿಗೂ ಒಳ್ಳೆಯದಾಗಲಿ, ಹಾಲುಮತ ಸಮಾಜವು ದೊಡ್ಡ ಮಟ್ಟದಲ್ಲಿ ಬೆಳೆಯಲಿ ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಶಿಕ್ಷಣ ಕಲಿಯಲಿ ಎಂದು ಆಶೀರ್ವದಿಸಿದರು.ನಂತರ ಕನಕದಾಸರ ಪುತ್ಥಳಿಯನ್ನ ಮಾಜಿ.ಜಿ ಪಂ.ಸದಸ್ಯರಾದ ಅರುಣಕುಮಾರ ಪಾಟೀಲ ರವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಹಾಲುಮತ ಸಮಾಜ ನಂಬಿಗಸ್ತ ಸಮಾಜ ಈ ಸಮಾಜಕ್ಕಾಗಿ ನಮ್ಮ ತಂದೆಯವರು ಹಾಗೂ ನಾನು ನಿರಂತರವಾಗಿದ್ದೆವೆ ನೀವು ಯಾವುದೇ ಸಂದರ್ಭದಲ್ಲಿ ಕೂಡ ನಿಮ್ಮ ಸಹಕಾರಕ್ಕೆ ನಾವು ಸದಾ ಸಿದ್ಧರಾಗಿರುತ್ತೇವೆ ಮುಂದಿನ ದಿನಗಳಲ್ಲಿ ನಾವು ನೀವೆಲ್ಲರೂ ಕೂಡಿ ತಾಲೂಕು ಮಟ್ಟದಲ್ಲಿ ಬಹುದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಳಿಂಗರಾಯ ಮುತ್ಯಾ ಗುರೂಜಿಗಳು ಸೇರಿದಂತೆ ಮುಖಂಡರಾದ ವಿಠ್ಠಲ ಜಗಲಗೊಂಡ ಗುರುನಾಥ್ ಪೂಜಾರಿ ಶ್ರೀಮತಿ ಶಿಲ್ಪಾ ಕುದುರಗೊಂಡ ಅಕ್ಷಯ ಗುತ್ತೇದಾರ್ ಬೀರಣ್ಣ ಬಿದನೂರ ಭೂತಾಳಿ ಹಿರೇಕೂರುಬುರ ಅಶೋಕ್ ಕನ್ನುರ ಸಂತೋಷ ರೆವೂರ ಭೀಮಾರಾಯ ರೆವೂರ ಸಿದ್ದು ಮಹಾಗಂವ ಪರಶುರಾಮ ಪ್ರಸಾದ ದತ್ತಪ್ಪ ರೆವೂರ ರುದ್ರಗೌಡ ಪಾಟೀಲ ಯಲ್ಲಪ್ಪ ಸಿಂದಗಿ ಸಿದ್ದಪ್ಪ ಗೊಬ್ಬುರ ಶಟ್ಟಪ್ಪ ಸಿಂದಗಿ ಪಂಡಿತ ಗೊಬ್ಬುರ ಶರಣಪ್ಪ ರೆವೂರ ಸಿದ್ದಪ್ಪ ರೆವೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
