
ಉದಯವಾಹಿನಿ ದೇವನಹಳ್ಳಿ : ರೈತರು ಖಾಸಗಿ ಬ್ಯಾಂಕುಗಳಲ್ಲಿ ವ್ಯವಹರಿಸುವ ಬದಲು ಸಹಾಕರಿ ಸಂಘದಲ್ಲೇ ವ್ಯವಹರಿಸಿ ಸಂಘದ ಅಭಿವೃದ್ಧಿ ಕೈಜೋಡಿಸಿ ಎಂದು ದೊಡ್ಡಸಣ್ಣೆ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸಿ.ಮುನಿರಾಜು ತಿಳಿಸಿದರು. ತಾಲೂಕಿನ ದೊಡ್ಡಸಣ್ಣೆ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಈ ಭಾಗದ ರೈತರ ಹಣವನ್ನು ಖಾಸಗಿ ಬ್ಯಾಂಕುಗಳಲ್ಲಿ ಠೇವಣೆ ಮಾಡಿದ್ದಾರೆ ಅದರ ಬದಲು ನಮ್ಮ ಸಹಕಾರಿ ಸಂಘದಲ್ಲೇ ಠೇವಣೆ ಮಾಡಿದರೆ ಮತ್ತಷ್ಟು ರೈತರಿಗೆ ಸಾಲ ನೀಡುವುದರ ಜೊತೆಗೆ ಸಂಘಕ್ಕೂ ಸಹ ಲಾಭಾಂಶ ಬರಲಿದೆ. ರೈತರಿಗೆ ಕೆಸಿಸಿ ಸಾಲ 97 ಲಕ್ಷ ನೀಡಲಾಗಿದೆ. ರೈತರು ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೂ ಸ್ತ್ರೀ ಶಕ್ತಿ ಸಂಘಗಳು ನಮ್ಮ ಸಹಕಾರ ಸಂಘದಲ್ಲೇ ಖಾತೆಗಳನ್ನು ತೆರೆದು ವ್ಯವಹಾರ ಮಾಡಿದರೆ ಅವರಿಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು. ಎಲ್ಲಾ ಸದಸ್ಯರ ಸಹಕಾರವಿದ್ದರೆ ಸಂಘವನ್ನು ಲಾಭಾಂಶದತ್ತ ಕೊಂಡೊಯ್ಯಲಾಗುವುದು ಎಂದರು. ಇದೆ ವೇಳೆ ದೊಡ್ಡಸಣ್ಣೆ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷೆ ಪುಷ್ಪಾವತಿ, ನಿರ್ದೇಶಕರಾದ ಎ.ಎಂ ವೆಂಕಟೇಶಪ್ಪ, ಎಂ. ಮುರಳಿಧರ್, ಪಿ.ವೆಂಕಟೇಶಯ್ಯ, ನಾರಾಯಣಸ್ವಾಮಿ, ನಾಗರಾಜಪ್ಪ, ನಾರಾಯಣಪ್ಪ, ನಾರಾಯಣಪ್ಪ, ಲಕ್ಷ್ಮಮ್ಮ, ಮುನಿಯಮ್ಮ, ಲಕ್ಷ್ಮಮ್ಮ, ರತ್ನಮ್ಮ ,ಪ್ರಕಾಶ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ.ಲಿಂಗರಾಜು, ಸಹಾಯಕ ವೈ.ನಾರಾಯಣಸ್ವಾಮಿ ಮುಂತಾದವರು ಇದ್ದರು.
