
ಉದಯವಾಹಿನಿ ಇಂಡಿ: ಶ್ರೀಭಿಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮರಗೂರ.ನಮ್ಮ ಕಾರ್ಖಾನೆಯ ಎಲ್ಲಾ ಶೇರುದಾರರಿಗೆ ಮತ್ತು ಸದಸ್ಯರಿಗೆ ತಿಳಿಪಡಿಸುವುದೆನೆಂದರೆ 2022-23ನೇ ಸಾಲಿನ 5ನೇ ವಾರ್ಷಿಕ ಸರ್ವಸಾಧಾರಣಾ ಸಭೆ ಸೆ,25 ರಂದು ಬೆಳಿಗ್ಗೆ 11- 00 ಗಂಟೆಗೆ ಕಾರ್ಖಾನೆಯ ಆವರಣದಲ್ಲಿ ಜರುಗಲಿದೆ.ಸಭೆಯ ಅಧ್ಯಕ್ಷತೆ ಶ್ರೀಭೀಮಾಶಂಕರ ಸಹಕಾರಿ ಕಾರ್ಖಾನೆಯ ಅಧ್ಯಕ್ಷ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಸಭೆಯ ಅಧ್ಯಕ್ಷತೆಯಲ್ಲಿ ವಾರ್ಷಿಕ ಸರ್ವಸಾಧಾರಣಾ ಸಭೆ ನಡೆಯಲಿದ್ದು.ಈಗಾಗಲೇಸದಸ್ಯರಿಗೆ ಸಭೆಯ ನೋಟಿಸು ಹಾಗೂ ವರದಿಯನ್ನು ಕಾರ್ಯಾವ್ಯಾಪ್ತಿಯ ಗ್ರಾಮಗಳ ನಮ್ಮ ಕಾರ್ಖಾನೆಯ ಕ್ಷೇತ್ರ ಸಹಾಯಕರ ಮೂಲಕ ಹಾಗೂ ಅಂಚೆ ಮುಖಾಂತರ ಕಳುಹಿಸಲಾಗಿರುತ್ತದೆ. ಒಂದು ವೇಳೆ ಈ ಸಭೆಯ ಮಾಹಿತಿಯು ಸಕಾಲಕ್ಕೆ ತಲುಪದೇ ಇದ್ದಲ್ಲಿ ಸಹ ಗೌರವಾನ್ವಿತ ಸದಸ್ಯರು ಸಮಯಕ್ಕೆ ಸರಿಯಾಗಿ ಸಭೆಗೆ ಉಪಸ್ಥಿತರಿರಲು ಶ್ರೀಭಿಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ, ಮರಗೂರ ವ್ಯವಸ್ಥಾಪಕನಿರ್ದೇಶಕರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
