
ಉದಯವಾಹಿನಿ ಕೋಲಾರ :- ಸರ್ಕಾರ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ವಿವಿಧ ರೀತಿಯ ಸೌಲಭ್ಯಗಳು ನೀಡುತ್ತಿದೆ. ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಎಂದು ಜೂನಿಯರ್ ಕಾಲೇಜು ಎಸ್ ಡಿ ಎಂ ಸಿ ಕೆ.ಎನ್.ಚಂದ್ರಶೇಖರ್ ರವರು ತಿಳಿಸಿದರು.ನಗರದ ಹೃದಯ ಭಾಗದಲ್ಲಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಅನುದಾನದಲ್ಲಿ ಶೂ ಹಾಗೂ ಸಾಕ್ಸ್ ವಿತರಿಸಿ ಮಾತನಾಡಿ ಸರ್ಕಾರ ಶಾಲೆಗಳಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಕೊಡುತಿದೆ ಪೋಷಕರು ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ಶಾಲೆಗೆ ಆಗಮಿಸಿ ತಮ್ಮ ಮಗುವಿನ ವಿದ್ಯಾಭ್ಯಾಸದ ಕುರಿತು ಚರ್ಚೆ ಮಾಡಿ ಮಾಹಿತಿ ಪಡೆದು ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜೂನಿಯರ್ ಕಾಲೇಜು ಸದಸ್ಯ ಪ್ರಾಂಶುಪಾಲ ಪರಶುರಾಮ್.ಎನ್ ಉಂಶಿ, ಬಾಲಕರ ಸರ್ಕಾರಿ ಪದವಿ ಪೂರ್ವ ಪ್ರೌಢಶಾಲೆ ಉಪ ಪ್ರಾಂಶುಪಾಲೆ ಬಿ.ಎಂ.ರಾಧ ಮ್ಮ, ಎಸ್‌ಡಿಎಂಸಿ ಸದಸ್ಯರಾದ ಪ್ರೇಮಾ, ಕಲ್ಪನಾ, ತೇಜಶ್ವಿನಿ, ಸಬಿಹಾ ಸುಲ್ತಾನ, ಮುಬೀನ್ ತಾಜ್, ಪೋಷಕರಾದ ರಮ್ಯ, ರೇಣುಕಾ ಶಿಕ್ಷಕರಾದ ಕೆಂಪೇಗೌಡ, ದ್ವಿತಿಯ ದರ್ಜೆ ಸಹಾಯಕ ಮಂಜುನಾಥ್, ಪ್ರೌಢಶಾಲಾ ಶಿಕ್ಷಕರು, ಶಾಲಾ ಮಕ್ಕಳು ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
