ಉದಯವಾಹಿನಿ ಮಾಲೂರು: ಕ್ರೀಡೆಗಳು ವಿದ್ಯಾರ್ಥಿಗಳ ಹಾಗೂ ಯುವಕರ ಅವಿಭಾಜ್ಯ ಅಂಗವಾಗಿದೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಗಳಲ್ಲಿ ಹೆಚ್ಚಾಗಿ  ಪಾಲ್ಗೊಳ್ಳುವಂತೆ ಶಾಸಕ ಕೆ ವೈ ನಂಜೇಗೌಡ ಹೇಳಿದರು.ಪಟ್ಟಣದ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ  2023 -24ನೇ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಕ್ರೀಡೆಗಳು ವಿದ್ಯಾರ್ಥಿಗಳು ಹಾಗೂ ಯುವಕರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಹಕಾರಿಯಾಗುತ್ತದೆ ಪ್ರತಿನಿತ್ಯ ನಮ್ಮ ದೈನಂದಿನ ಜೀವನದಲ್ಲಿ ನಡಿಗೆ ವ್ಯಾಯಾಮ ಯೋಗಾಸನ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಮ್ಮ ದೈಹಿಕ ಶಕ್ತಿ ಹೆಚ್ಚುವುದಲ್ಲದೆ ಮನಸ್ಸು ಉಲ್ಲಾಸವಾಗಿರುತ್ತದೆ
ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ತೀರ್ಪುಗಾರರ ತೀರ್ಪಿಗೆ ಬದ್ಧರಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆಯುವಂತೆ ಹೇಳಿದ ಅವರು ತಾಲೂಕಿನಲ್ಲಿ ಕ್ರೀಡಾಕೂಟಗಳಲ್ಲಿ ವಿಜೇತರಾಗಿ ರಾಜ್ಯಮಟ್ಟ ಹಾಗೂ ರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಹೆಸರು ಪಡೆದಿದ್ದಾರೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವೈಯುಕ್ತಿಕ ಕ್ವಾಗಿ ಸಹಕಾರ ನೀಡಲಾಗುವುದು  ಉಪನ್ಯಾಸಕರು ಹಾಗೂ  ದೈಹಿಕ ಶಿಕ್ಷಣ ಶಿಕ್ಷಕರು  ಮಕ್ಕಳಿಗೆ ಶಿಸ್ತನ್ನು ರೂಡಿಸುವುದರ ಜೊತೆಗೆ ಕ್ರೀಡೆಗಳ  ತರಬೇತಿ ನೀಡಿ ಜಿಲ್ಲಾ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚಿನ ಬಹುಮಾನಗಳು ಪಡೆಯುವಂತೆ ಮಾಡಬೇಕು ಎಂದರು.ಕ್ರೀಡಾ ಜ್ಯೋತಿಯನ್ನು ಹೊತ್ತು ತಂದ ವಿದ್ಯಾರ್ಥಿಗಳು ಶಾಸಕರಿಗೆ ನೀಡಿದರು. ಶಾಸಕ ಕೆ.ವೈ. ನಂಜೇಗೌಡ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.  ಕ್ರೀಡಾಕೂಟದ ಯಶಸ್ವಿಗೆ ಪಾರಿವಾಳಗಳನ್ನು ಹಾಗೂ ಬಲೂನುಗಳನ್ನು ಹಾರಿ ಬಿಡಲಾಯಿತು.ಸ್ವಂತ ಖರ್ಚಿನಲ್ಲಿ ಕ್ರೀಡಾಪಟುಗಳಿಗೆ ಜರ್ಸಿಗಳನ್ನು ಶಾಸಕ ಕೆ ವೈ ನಂಜೇಗೌಡ ವಿತರಿಸಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಉಪ ನಿರ್ದೇಶಕ ರಾಮಚಂದ್ರಪ್ಪ,  ಬಿ ಇ ಓ ಚಂದ್ರಕಲಾ, ಪುರಸಭಾ ಸದಸ್ಯ ಆರ್ ವೆಂಕಟೇಶ್,  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ. ಮುನೇಗೌಡ, ಪೊಲೀಸ್ ನಿರೀಕ್ಷಕ ವಸಂತ್ ಕುಮಾರ್, ಪ್ರಾಂಶುಪಾಲರಾದ ಚಂದ್ರಿಕಾ, ಮಂಜುಳಾ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ   ಹನುಮಂತರ ರೆಡ್ಡಿ, ಉಪನ್ಯಾಸಕರಾದ ಎಂ. ಸಿ ಚಂದ್ರಪ್ಪ, ರಾಜಪ್ಪ , ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್,  ಟಿಪಿಓ ವೈ ವೆಂಕಟೇಶ್, ಗೋಪಿನಾಥ್  ದೈಹಿಕ ಶಿಕ್ಷಣ ಶಿಕ್ಷಕರು ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!