ಉದಯವಾಹಿನಿ ಮಸ್ಕಿ: ಮಾಮೂಲಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಟ್ರ‍್ಯಾಕ್ಟರ್ ಮಾಲೀಕನೊರ್ವನಿಗೆ ಬಾಯಲ್ಲಿ ಬೂಟು ಇಟ್ಟು ಬಾಸುಂಡೆ ಬರುವಂತೆ ಪಿಎಸ್‌ಐ ಮಣಿಕಂಠ ಅವರು ಹೊಡೆದಿರುವ ಘಟನೆ ಮಸ್ಕಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ರಾಮಲದಿನ್ನಿ ಗ್ರಾಮದ ರೈತ ನಿರುಪಾದಿ ನಾಯಕ ಅವರು ಮನೆಯ ಸಲುವಾಗಿ ಟ್ರಾö್ಯಕ್ಟರ್ ಮೂಲಕ ಮರಂ ಸಾಗಾಟ ಮಾಡುತ್ತಿದ್ದನ್ನು ಪಿಎಸ್‌ಐ ಮಣಿಕಂಠ ಅವರು ತಡೆಹಿಡಿದು ಅವಾಚ್ಯ ಶಬ್ದದಿಂದ ನಿಂದಿಸಿದ್ದು, ಅಲ್ಲದೇ ಠಾಣೆಗೆ ಕರೆದುಕೊಂಡು ಬಂದು ಬಾಸುಂಡೆ ಬರುವಂತೆ ಮಾರಂತಿಕವಾಗಿ ಹಲ್ಲೆ ಮಾಡಿದ್ದಾರೆ. ರೈತ ನಿರುಪಾದಿ ಅವರು ಅಂಬುಲೆನ್ಸ್ ಮೂಲಕ ರಾಯಚೂರಿಗೆ ತೆರಳಿ ಎಸ್ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ಬೆನ್ನಲೆ ತಾಲೂಕಿನ ವ್ಯಾಪ್ತಿಯ ವಾಲ್ಮೀಕಿ ಸಮುದಾಯದ ಮುಖಂಡರು ಠಾಣೆಯ ಮುಂದೆ ಜಮಾವಣೆಗೊಂಡು ಕೆಲ ಕಾಲ ಪ್ರತಿಭಟಿಸಿ ಪಿಎಸ್‌ಐ ವಿರುದ್ದ ಅಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ವಾಲ್ಮೀಕಿ ಸಮುದಾಯದ ಮುಖಂಡ ಆರ್.ಕೆ ನಾಯಕ ಅವರು ಮಾತನಾಡಿ, ನಿಜವಾಗಿ ಮರಂ ಸಾಗಾಟ ಮಾಡುತ್ತಿರುವ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ, ಮನೆ ಸಲುವಾಗಿ ಮರಂ ತಂದಿದಕ್ಕೆ ಟ್ರಾö್ಯಕ್ಟರ್ ಮಾಲೀಕನಿಗೆ ಪಿಎಸ್‌ಐ ಅವರು ಹಿಗ್ಗಮುಗ್ಗವಾಗಿ ಥಳಿಸಿ ಬಾಸುಂಡೆ ಬರುವಂತೆ ಹೊಡೆದಿದ್ದು ಖಂಡನೀಯವಾಗಿದೆ. ಈ ಕೂಡಲೇ ಪ್ರಕರಣವನ್ನು ಗಣನೆಗೆ ತಗೆದುಕೊಂಡು ಪಿಎಸ್‌ಐ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಇಲ್ಲದೆ ಹೋದರೆ ವಾಲ್ಮೀಕಿ ಸಮುದಾಯದ ವತಿಯಿಂದ ಮಸ್ಕಿ ಪಟ್ಟಣದ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಪಿಎಸ್‌ಐ ದೂರು ನೀಡಲು ಬೆಳಿಗ್ಗೆಯಿಂದ ಸಂಜೆಯವರೆಗೆ ಠಾಣೆಯ ಮುಂದೆ ನೂರಾರು ರೈತ ಮುಖಂಡರು ನಿಂತಿರುವ ದೃಶ್ಯ ಕಂಡು ಬಂದಿದೆ. ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ ಭೀಮಣ್ಣ ನಾಯಕ, ಶಿವಣ್ಣ ನಾಯಕ, ರಾಘವೇಂದ್ರ ನಾಯಕ, ಮೌನೇಶ ನಾಯಕ, ಗೋವಿಂದಪ್ಪ ವೆಂಕಟಾಪೂರ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
