ಉದಯವಾಹಿನಿ ದೇವದುರ್ಗ: ಬಿಡಾಡಿ ಜಾನುವಾರಗಳಿಂದ ಬೈಕ್ ಸವಾರರಿಗೆ, ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಜಾನುವಾರಗಳ ಮಾಲೀಕರು ರಸ್ತೆಗೆ ಬಿಡದಂತೆ ಎಚ್ಚರವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಹೇಳಿದರು. ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಹಲವು ಬಾರಿ ಟಂಟಂ ವಾಹನ ಮೂಲಕ ಜಾಗೃತಿ ಮೂಡಿಸಲಾಗಿದೆ. ಆದರೂ ಮಾಲೀಕರು ಒಬ್ಬರೂ ಎಚ್ಚತ್ತಗೊಳ್ಳುತ್ತಿಲ್ಲ. ಬಿಡಾಡಿ ಜಾನುವಾರಗಳಿಂದ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಜಾನುವಾರಗಳ ಮಾಲೀಕರು ಮನೆಯಲ್ಲಿ ಕಟ್ಟಿಕೊಳ್ಳಬೇಕು. ರಸ್ತೆಗೆ ಬಿಡುವುದ್ದರಿಂದ ಸಮಸ್ಯೆಗೆ ಕಾರಣವಾಗುತ್ತಿದೆ. ಮಾಲೀಕರು ಎಚ್ಚತ್ತೆಗೊಳ್ಳದೇ ಹೋದಲ್ಲಿ ಅವುಗಳನ್ನು ಗೋಶಾಲೆಗೆ ಕಳಿಸಲಾಗುತ್ತದೆ ಎಂದು ಹೇಳಿದರು. ರಸ್ತೆಯಲ್ಲಿರುವ ಜಾನುವಾರಗಳನ್ನು ಕಚೇರಿಯ ಆವರಣಕ್ಕೆ ತೆಗೆದುಕೊಂಡು ಬಂದಾಗ ಪ್ರಭಾವಿಗಳು ಬಂದು ಬಿಡಿಸಿಕೊಂಡು ಹೋಗಲಾಗುತ್ತಿದೆ. ಸಮುದಾಯ ಸಾಹಕರ ಇದ್ದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕಾಗುತ್ತದೆ ಎಂದರು. ಬಿಡಾಡಿ ಜಾನುವಾರುಗಳು ರಸ್ತೆಗೆ ಬಿಡದಂತೆ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ಇನ್ನಾದರೂ ಮಾಲೀಕರು ರಸ್ತೆ ಬಿಡದಂತೆ ಎಚ್ಚತ್ತಗೊಳ್ಳಬೇಕು. ಜಾಗೃತಿ ಮಧ್ಯೆ ಬಿಟ್ಟಲ್ಲ ಅವುಗಳನ್ನು ಗೋಶಾಲೆಗೆ ಕಳಿಸಲಾಗುತ್ತದೆ ಎಂದು ಹೇಳಿದರು.
