ಉದಯವಾಹಿನಿ ಸಿಂಧನೂರು:ತಾಲೂಕಿನ ತುರುವಿಹಾಳ ಹತ್ತಿರದ ಶ್ರೀ ನಾಗಲಿಂಗೇಶ್ವರ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ವತಿಯಿಂದ 2022-23 ನೇ ಸಾಲಿನಲ್ಲಿ 13ವರ್ಷಗಳ ಸೇವೆ ಸಲ್ಲಿಸಿದ ಮಹೇಶ ಶಿಕ್ಷಕರಿಗೆ ಗುರುವಂದನಾ ಹಾಗೂ ಬೀಳ್ಕೊಡುಗೆ ಸಮಾರಂಭ ಜರುಗಿತು. 2022-23 ನೇ ಸಾಲಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಲಿಂಗೇಶ್ವರ ಕ್ಯಾಂಪ್ ಶಾಲೆಯಲ್ಲಿ 13 ವರ್ಷಗಳ ಶಿಕ್ಷಕರಾಗಿ ಸೇವೆ ಸಲ್ಲಿಸಿ ತವರು ಜಿಲ್ಲೆಗೆ ವರ್ಗಾವಣೆಯಾಗಿ ತೆರಳಿದ ಮಹೇಶ ಶಿಕ್ಷಕರಿಗೆ ಬಿಳ್ಕೋಡುಗೆ ಸಮಾರಂಭ ನಡೆಯಿತು. ಜೊತೆಗೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಿ ಪ್ರೀತಿಯಿಂದ ಸನ್ಮಾನಿಸಲಾಯಿತು.

Box ಸನ್ಮಾನ ಸ್ವೀಕರಿಸಿದ ಶಿಕ್ಷಕ ಮಹೇಶ ಮಾತನಾಡಿ ಮಕ್ಕಳಿಗೆ ಶಿಕ್ಷಣ ಕಲಿಸುವಲ್ಲಿ ನನ್ನ 13ವರ್ಷಗಳ ಸೇವೆಯನ್ನು ಇಲ್ಲಿ ಸಲ್ಲಿಸಿದ್ದೇನೆ.ಮಕ್ಕಳಿಗೆ ಕಲಿಸುವಾಗ ನಾನು ಮಗುವಾಗಿ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಈ ಶಾಲೆ ಬಿಟ್ಟು ಹೋಗಲು ನನಗೆ ತುಂಬಾ ಬೇಸರವಾಗಿದೆ ಆದರೆ ಇಂತಹ ಶಾಲೆಯನ್ನು ನಾನು ಮತ್ತೆ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ ಯಾಕೆಂದರೆ ಇಲ್ಲಿನ ಶಿಕ್ಷಕರ ಸಹಕಾರ,ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಹಾಗೂ ಮಕ್ಕಳ ಕಲಿಕೆಯ ಉತ್ಸಾಹ ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ. ಶಿಕ್ಷಕರಾದ ನಾವುಗಳು ವಿದ್ಯಾರ್ಥಿಗಳನ್ನು ನಮ್ಮ ಮಕ್ಕಳಂತೆ ಕಾಣಬೇಕು,ನಮ್ಮ ಮಗುವಿನಂತೆ ಕಲಿಸಬೇಕು ತಂದೆ ತಾಯಿಗಳ ನಂತರದಲ್ಲಿ ಶಿಕ್ಷಕರುಗಳೇ ಗುರುಗಳಾಗಿರುತ್ತಾರೆ ಮಕ್ಕಳೂ ಕೂಡ ಆಸಕ್ತಿಯಿಂದ ಕಲಿಯುತ್ತಾರೆ.ನಮ್ಮ ಶಾಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ನಾನು ಕಲಿಸಿದ ಪಾಠವನ್ನು ಕಲಿಸುತ್ತಿದ್ದರು ಇದೇ ರೀತಿ ಮುಂದಿನ ಎಲ್ಲಾ ಶಿಕ್ಷಕರು ಹೇಳಿದ ಪಾಠವನ್ನು, ಮಾರ್ಗದರ್ಶನವನ್ನು ಚಾಚುತಪ್ಪದೇ ಪಾಲಿಸಬೇಕು ಅದೇ ನನಗೆ ಸಿಗುವ ಖುಷಿ,ಊರಿನ ಪಾಲಕರು ಪೋಷಕರು,ಶಾಲೆಯ ಸಮಿತಿಯ ಸದಸ್ಯರೂ ಕೂಡ ನನಗೆ ಸಹಕಾರ ನೀಡಿದ ಹಾಗೆ ಈಗಿನ ಶಿಕ್ಷಕರಿಗೂ ಸಹಕಾರ ನೀಡಿ ಶಾಲೆಯ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು. 

ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು,ಸದಸ್ಯರು,ಗ್ರಾಮ ಪಂಚಾಯತಿ ಸದಸ್ಯರು,ಹಳೆ ವಿದ್ಯಾರ್ಥಿಗಳ ಸಂಘದವರು , ಊರಿನ ಗುರು ಹಿರಿಯರು, ಪಾಲಕರು,ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!