ಉದಯವಾಹಿನಿ, ಸಿರುಗುಪ್ಪ : ಬೆಳಿಗ್ಗೆ ಕಂಪ್ಲಿ ಮತ್ತು ನಡವಿಯಿಂದ ವಾಪಸ್ಸಾಗಿ ಬರುವ ಬಸ್ ತುಂಬಿದೆAದು ಹೆರಕಲ್ ಗ್ರಾಮದಲ್ಲಿ ನಿಲ್ಲಿಸದೇ ಬರುತ್ತಿರುವುದರಿಂದ ನಿಟ್ಟೂರು ಗ್ರಾಮದಿಂದ ವಾಪಸ್ಸಾಗುವಂತೆ ಇನ್ನೊಂದು ಬಸ್ಸು ಹೆಚ್ಚುವರಿಯಾಗಿ ಬಸ್ ಬಿಡುವಂತೆ ಆಗ್ರಹಿಸಿ ಹೆರಕಲ್ ಗ್ರಾಮದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಬಸ್ ತಡೆದು ದಿಡೀರನೇ ಪ್ರತಿಭಟಿಸಿದ್ದಾರೆ.
ನಂತರ ಬಸ್ ಘಟಕಕ್ಕೆ ಬಂದು ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಿಗ್ಗೆ ನಡವಿ ಗ್ರಾಮದಿಂದ ವಾಪಾಸ್ಸಾಗಿ ಬರುವ ಬಸ್ ಮತ್ತು ಕಂಪ್ಲಿಯಿAದ ಬರುವ ಬಸ್‌ಗಳು ಅತಿಹೆಚ್ಚು ಜನರನ್ನು ತುಂಬಿಕೊAಡು ಬರುತ್ತಿದ್ದು ಹೆರಕಲ್ ಗ್ರಾಮದಲ್ಲಿ ಬಸ್ ತುಂಬಿದೆAದು ನಿಲ್ಲಿಸದೇ ಬರುತ್ತಿದ್ದಾರೆ. ಸರ್ಕಾರದ ಯೋಜನೆಯಾದ ಶಕ್ತಿಯೋಜನೆ, ಹಾಗೂ ಪ್ರತಿ ವರ್ಷಕ್ಕೆ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುತ್ತಿರುವ ವಿದ್ಯಾರ್ಥಿಗಳ ಹೆಚ್ಚಳದಿಂದಾಗಿ ಬೆಳ್ಳಿಗಿನ ಎರಡು ಬಸ್‌ಗಳು ತುಂಬಿರುತ್ತವೆ. ಆದ್ದರಿಂದ ಮೊದಲಿನಂತೆ ಬೆಳಿಗ್ಗೆ ನಿಟ್ಟೂರು ಗ್ರಾಮದಿಂದ ವಾಪಸ್ಸು ಬರುವಂತೆ ಹೆಚ್ಚುವರಿ ಬಸ್ಸು ನಿಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಘಟಕ ವ್ಯವಸ್ಥಾಪಕ ಕೆ.ಎಮ್.ತಿರುಮಲೇಶ್ ಅವರು ಮಾತನಾಡಿ ನಿಟ್ಟೂರು ಗ್ರಾಮಕ್ಕೆ ಒಬ್ಬ ಸಾರಿಗೆ ನಿಯಂತ್ರಣಾಧಿಕಾರಿಯನ್ನು ನಿಯೋಜಿಸುವುದರೊಂದಿಗೆ ಬಸ್ ಸದರಿ ಗ್ರಾಮಗಳಾದ ನಿಟ್ಟೂರು ಮತ್ತು ಹೆರಕಲ್ ಗ್ರಾಮಗಳಿಗೆ ಬಸ್ ನಿಲ್ಲುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು
