ಉದಯವಾಹಿನಿ ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಸಾರ್ವಜನಿಕರು,ಮಹಿಳೆಯರು ಇತ್ತೀಚೆಗೆ ಸಿರಿಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಹೆಣ್ಣು ಮಕ್ಕಳಿಗೆ ಸಂತಾನ ಹರಣ ಶಸ್ತç ಚಿಕಿತ್ಸೆ( ಆಪರೇಷನ್ ) ಮಾಡಲು ವ್ಯವಸ್ಥೆ ಮಾಡಿಕೊಡಬೇಕೆಂದು ಡಾ.ತಿಪ್ಪೇಸ್ವಾಮಿ ರೆಡ್ಡಿಗೆ ಮನವಿ ಮಾಡಿದರು.ಶಿಕ್ಷಣಪ್ರೇಮಿ ವಿ.ಹನುಮೇಶ್ ಮಾತನಾಡಿ ಈ ಹಿಂದೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತ್ಯುತ್ತಮವಾಗಿ ಸಿರಿಗೇರಿ ಸುತ್ತಮುತ್ತ ಗ್ರಾಮಗಳಾದ ನಡವಿ,ಮುದ್ದಟ್ಟನೂರು,ಕೊಂಚಿಗೇರಿ,ದಾಸಾಪುರ,ಗುAಡಿಗನೂರು,ಮಾಳಾಪುರ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂತಾನಹರಣ ಶಸ್ತç ಚಿಕಿತ್ಸೆ ಯಶಸ್ವಿ ಮಾಡಲಾಗಿತ್ತು.ಅಧಿಕಾರಿಗಳು ಪ್ರಸ್ತುತ ಇಲ್ಲ ಸಲ್ಲದ ಸಬೂಬುಗಳನ್ನು ಹೇಳುತ್ತಾ ಕೊಠಡಿಗಳ ಕೊರೆತಯಿಂದ ಈ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ.ಎಂದು ತಿಳುಸುತ್ತಾರೆ.ಈ ನಿಟ್ಟಿನಲ್ಲಿ ಬಾಣಂತಿಯರು ನಗರ ಪ್ರದೇಶಗಳಿಗೆ ತೆರಳಬೇಕಾದ ಪರಿಸ್ಥಿತಿ ಬಂದೊದಗಿದೆ. ವಿಶ್ವಜ್ಞಾನಿ ಶೈಕ್ಷಣಿಕ ಸಾಂಸ್ಕçತಿಕ ಸಂಘದ ಅಧ್ಯಕ್ಷ ಲಕ್ಷö್ಮಣ್ ಭಂಡಾರಿ ಮಾತನಾಡಿ ಗ್ರಾಮದಿಂದ ನಗರ ಪ್ರದೇಶಗಳಿಗೆ ಹೋಗಬೇಕಾದರೆ ಸುಮಾರು ೧ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.ನಗರ ಪ್ರದೇಶಗಳಲ್ಲಿ ಅತೀ ಹೆಚ್ಚು ಬಾಣಂತಿಯರು ಆಸ್ಪತ್ರೆಗಳಿಗೆ ತೆರಳುವುದರಿಂದ ಬೆಡ್‌ಗಳ ಸಮಸ್ಯೆಯಿಂದ ಕೆಲ ಗ್ರಾಮೀಣ ಬಾಣಂತಿಯರನ್ನು ವೈದ್ಯಾಧಿಕಾರಿಗಳು ಹಿಂದಿರುಗಿ ಕಳುಹಿಸುತ್ತಿರುವ ಪ್ರಸಂಗಗಳು ಎದುರಾಗಿವೆ.ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಮನವಿ ಸ್ವೀಕರಿಸಿ ವೈದ್ಯಾಧಿಕಾರಿ ತಿಪ್ಪೇಸ್ವಾಮಿ ರೆಡ್ಡಿ ಮಾತನಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿಯೇ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಲಕ್ಷö್ಮಣ್ ಭಂಡಾರಿ,ಸದ್ದಾA ಹುಸೇನ್,ಶ್ರೀ ರಾಮ್,ರಾಕೇಶ್,ಉಮೇಶ್ ಇತರರು ಇದ್ದರು
