ಉದಯವಾಹಿನಿ,ಬೆಂಗಳೂರು:  ಸಂವಿಧಾನ ಶಿಲ್ಪಿ ವಿಶ್ವ ರತ್ನ ವಿಶ್ವಗುರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಿ ಶಾಸಕರು ಎಸ್ ಟಿ ಸೋಮಶೇಖರ್ ಗೌಡರು ಲೋಕಾರ್ಪಣೆ ಮಾಡಿದರುಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ ಅವಕಾಶ ವಂಚಿತರಾದ ಸಮುದಾಯಗಳಿಗೆ ಮೀಸಲಾತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ರಾಜಕೀಯ ಅಧಿಕಾರ ಪಡೆಯಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ ಪ್ರಜಾಪ್ರಭುತ್ವದ ಬಲಗೊಳಿಸಿದ್ದಾರೆ ಎಂದು ಮಾಜಿ ಸಚಿವರು ಹಾಲಿ ಶಾಸಕರು ಎಸ್ ಟಿ ಸೋಮಶೇಖರ್ ಗೌಡ್ರು ತಿಳಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆಂಗೇರಿ ಉಪನಗರ ದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸಂವಿಧಾನ ಶಿಲ್ಪಿ ವಿಶ್ವಗುರು ವಿಶ್ವ ರತ್ನ Dr ಬಿ ಆರ್ ಅಂಬೇಡ್ಕರ್ ಅವರ ಉದ್ಘಾಟನೆ ಅಂಬೇಡ್ಕರ್ ಪ್ರತಿಭೆ ಲೋಕಾರ್ಪಣೆ ಮಾಡಿ ಅವರು ಮಾತನಾಡಿ ತಳ ಸಮುದಾಯದವರು ಶೈಕ್ಷಣಿಕ ಆರ್ಥಿಕ ಸಾಮಾಜಿಕ ಪ್ರಗತಿ ಗೆ ಅನೇಕ ಜನಪರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಬದ್ಧನಾಗಿದ್ದೇನೆ ಎಂದು ನುಡಿಮುತ್ತುಗಳನ್ನು ತಿಳಿಸಿದರು.ಅಬಕಾರಿ ಇಲಾಖೆಯ ಉಪ ಆಯುಕ್ತಕರಾದ ಎನ್ ಎಸ್ ರವಿಶೇಖರ್ ಮಾತನಾಡಿ ಸಮಾಜದಲ್ಲಿ ಬೇರೂರುದ್ದು ಶ್ರೇಣಿಕೃತ ಸಾಮಾಜಿಕ ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿ ಸಿದ್ಧ ಅಂಬೇಡ್ಕರ್ ಅವರ ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಮೂಲಕ ಒಂದೇ ಹಕ್ಕನ್ನು ಪ್ರತಿಪಾದಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದಾರೆ ಎಂದರು. ಡಾ. ಬಿ ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ ಬದಲಾವಣೆ ಪ್ರಯತ್ನಿಸ ಬೇಕಿದೆ ಎಂದರು ಯಾವುದೇ ಕಾರಣಕ್ಕೂ ಅಂಜಬೇಕಾಗಿಲ್ಲ ತಪ್ಪನ್ನು ಪ್ರಶ್ನಿಸುವ ಮನೋಭಾವ ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದ ಉಪನ್ಯಾಸಕಿ ಬಿ ಯು. ಸುಮಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಭೆಯ ಅನಾವರಣ ಸಮಿತಿಯ ಸದಸ್ಯರುಗಳಾದ ರಾಹುಲ್ ಧರ್ಮಸೇನ ಕಾಂತರಾಜ್. ನವಾಜ್ ಹಲo ಎಂಎಲ್ ಶರತ್ ಕುಮಾರ್ ಶೈಲೇಶ್. ವಿವೇಕ್. ಚಾಮುಂಡಿ ಶಿವಕುಮಾರ್ ಡಿಎಸ್ಎಸ್ ವೆಂಕಟೇಶ್ ಸತ್ಯ ಶ್ರೀನಿವಾಸ್ ಸಮಿತಿಯ ಎಲ್ಲಾ ಕಾರ್ಯಕರ್ತರು ಸಮಾರಂಭದಲ್ಲಿ ಎಲ್ಲರೂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!