
ಉದಯವಾಹಿನಿ ಗದಗ: ಸೊರಟೂರ ಗ್ರಾಮದ ಕೆಪಿಎಸ್ ಡಿ ಪಿ ಈ ಪಿ ಶಾಲೆಯಲ್ಲಿ ಪ್ರಾಥಮಿಕ ಪ್ರೌಢಶಾಲಾ ಮಕ್ಕಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮ ಜರಗಿತು. ಒಂದರಿಂದ ನಾಲ್ಕನೇಯ ತರಗತಿಯ ಮಕ್ಕಳ ಸ್ಪರ್ಧೆಯಲ್ಲಿ ಶ್ರೇಯಾ ಮಾರುತಿ ಮಲ್ಲಾಡದ ಕಥೆ ಹೇಳುವ ವಿಭಾಗದಲ್ಲಿ ಪ್ರಥಮ. ರಿಜ್ವಾನ್ ಸರ್ಕಸ್ ನವರ್ ಕವನ ವಾಚನ. ಭೈರಪ್ಪ ತಳಕಲ್ ಭಕ್ತಿಗೀತೆ. ಮಾನಸಾ ಬಾಗೇವಾಡಿ ಅಭಿನಯ ಗೀತೆ. ಶ್ರೀನಿವಾಸ ಚೆನ್ನವೀರ ಶೆಟ್ಟರ್ ಆಶುಭಾಷಣ. ರಿಜ್ವಾನ್ ಸಂಶಿ ಕಂಠಪಾಠ. ಪ್ರತಿಕ್ಷ ಹಡಪದ್ ಪ್ರಥಮ ಸ್ಥಾನ ಗಳಿಸಿದ್ದಾರೆ.ಹಾಗೂ ಐದರಿಂದ ಏಳನೇಯ ತರಗತಿಯ ಮಕ್ಕಳ ಸ್ಪರ್ಧೆಯಲ್ಲಿ ಪವಿತ್ರ ಗಾಣಿಗೇರ್. ಶಿಲ್ಪಾ ಓಂಕಾರಿ. ಸಂಜನಾ ಜಾಮದಾರ. ಭರತ್ ಮಲ್ಲಾರಿ. ಚೈತ್ರ ಗಾಣಿಗೇರ. ಪ್ರಥಮ ಇನ್ನು ಮುಂತಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ಎಸ್ಎ ಅವಾರಿ. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಸ್ ಬಿ ಗೌಡನಾಯಕ್. ಕನ್ನಡ ಶಿಕ್ಷಕರಾದ ಎಂ ಎ ಯರಗುಡಿ. ಡಿ ಪಿ ಈ ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ ಸಿ ಚೌವಾಣ. ಶ್ರೀಮತಿ ವಿ ಆರ್ ಬಂಡಾ. ಹಾಗೂ ಸಿ ಆರ್ ಪಿ. ಕೆ ಬಿ ಕಾತರಕಿ. ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಗ್ರಾಮಸ್ಥರು ಮಕ್ಕಳಿಗೆ ಅಭಿನಂದಿಸಿದ್ದಾರೆ.
