ಉದಯವಾಹಿನಿ, ಕೊಲ್ಹಾರ:ಪಿಂಚಣಿದಾರರು ತಮ್ಮ ಕುಂದುಕೊರತೆ ನೋಂದಾಯಿಸಲು, ಪಿಂಚಣಿ ಕುರಿತ ಮಾಹಿತಿ ಪಡೆಯಲು, ಹಂಚಿಕೊಳ್ಳಲು ಹಾಗೂ ಪರಸ್ಪರ ಭೇಟಿಯಾಗಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಂಚಣಿ ದಿನದ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ 26ರ ಬೆಳಿಗ್ಗೆ 11 ಗಂಟೆಗೆ ಕೊಲ್ಹಾರ ತಹಶೀಲ್ದಾರ ನೇತೃತ್ವದಲ್ಲಿ ತಳೇವಾಡ ಗ್ರಾಪಂ ಕಾರ್ಯಾಲಯದಲ್ಲಿ, ಪಿಂಚಣಿ ದಿನ ನಡೆಸಲಿದ್ದಾರೆ. ಪಿಂಚಣಿದಾರರ ಪೂರ್ಣ ಪ್ರಮಾಣದ ಮಾಹಿತಿಯೊಂದಿಗೆ ಅಧಿಕಾರಿಗಳು ಹಾಜರಿಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
