
ಉದಯವಾಹಿನಿ, ಮಸ್ಕಿ: ಅಮಾಯಕನ ಹಲ್ಲೆ ಮಾಡಿದ ಪಿಎಸ್ಐ ಮಣಿಕಂಠ ಅವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಒತ್ರಾಯಿಸಿ ದಲಿತಪರ ಸಂಘಟನೆ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಠಾಣೆಯ ಮುಂದೆ 2ನೇ ದಿನ ಪ್ರತಿಭಟನೆ ಮುಂದುವರಿಸಿದರು. ಮರಳು ಮಿಶ್ರಿತ ಮಣ್ಣು ಸಾಗಾಟ ಮಾಡುತ್ತಿದ್ದ ನಿರುಪಾದಿ ನಾಯಕನ ಮೈ ಮೇಲೆ ಬಾಸುಂಡೆ ಬರುವಂತೆ ಮಾರಣಾಂತಿಕ ಹಲ್ಲೆ ಮಾಡಿರುವ ಪಿಎಸ್ಐ ಮಣಿಕಂಠ ಅವರ ದಬ್ಬಾಳಿಕೆ ಮೀತಿ ಮೀರಿದೆ, ಪಿಎಸ್ಐ ವರ್ತನೆಗೆ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ, ಇವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು, ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ದಲಿತ ಸಂಘಟನೆ ಮುಖಂಡ ಪ್ರಶಾಂತ ನಿಲೋಗಲ್ಲ ಅವರು ಮಾತನಾಡಿ ನಿರುಪಾದಿ ಅವರ ಮೇಲೆ ಹಲ್ಲೆಯಾಗಿ ಇವತ್ತಿಗೆ ಮೂರು ದಿನಗಳ ಕಳೆದು ಹೋಗಿದ್ದು, ಪಿಎಸ್ಐ ಅವರ ಮೇಲೆ ಯಾವುದೇ ರೀತಿ ಕ್ರಮ ಕೈಗೊಳ್ಳದೇ ಇರುವುದು ಕಾಣದ ಕೈಗಳ ಕೈವಾಡ ಇದೆ ಎಂದು ಆರೋಪಿಸಿದರು. ಅವರ ಸಂಗಡಿಗರು ಸೇರಿ ಕೆಲ ಕ್ರಾಂತಿಕಾರಿ ಹಾಡುಗಳನ್ನು ಹಾಡುವ ಮೂಲಕ ಪಿಎಸ್ಐ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಡಿವೈಎಸ್ಪಿ ಮಂಜುನಾಥ ಅವರು ಪ್ರತಿಭಟನಾ ಸ್ಥಳಕ್ಕೆ ಬೇಟಿಯಾಗಿ ಪಿಎಸ್ಐ ಮಣಿಕಂಠ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ, ಪ್ರತಿಭಟನೆಯನ್ನು ಕೈ ಬಿಡಬೇಕೆಂದು ಮನವಿ ಮಾಡಿದರು. ಮೊದಲು ಪಿಎಸ್ಐ ಮಣಿಕಂಠ ಅವರ ಮೇಲೆ ಪ್ರಕರಣ ದಾಖಲಿಸುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಅಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಸಿಪಿಐ ಬಾಲಚಂದ್ರ ಲಕ್ಕಂ, ವಾಲ್ಮೀಕಿ ಸಮುದಾಯದ ಮುಖಂಡ ಆರ್.ಕೆ ನಾಯಕ, ಚಂದ್ರಶೇಖರ ಉದ್ಬಾಳ, ರಾಘವೇಂದ್ರ ಬಳಗಾನೂರು, ಬೀಮಣ್ಣ ನಾಯಕ, ಗೋವಿಂದ ವೆಂಕಟಾಪೂರ, ದೇವರಾಜ ಮಡಿವಾಳ, ದಲಿತಪರ ಸಂಘಟನೆ ಮುಖಂಡ ಹನುಮಂತಪ್ಪ ದಿನಸಮುದ್ರ, ಬಸವರಾಜ ಚಿಕ್ಕಕಡಬೂರು ಸೇರಿದಂತೆ ಇನ್ನಿತರಿದ್ದರು
