
ಉದಯವಾಹಿನಿ,ಪೀಣ್ಯ ದಾಸರಹಳ್ಳಿ: 8ನೇ ಮೈಲಿಯಿಂದ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಬಾಗಲಗುಂಟೆ ಸಾಯಿ ಕಲ್ಯಾಣ ಮಂಟಪದವರೆಗೆ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹಾಗೂ ಬಿಜೆಪಿ ಹಿರಿಯ ಮಹಿಳಾ ಮುಖಂಡೆ ಸುಜಾತ ಮುನಿರಾಜು ಇವರುಗಳ ನೇತೃತ್ವದಲ್ಲಿ ಸಾವಿರಾರು ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಸೇರಿದಂತೆ ಪ್ರಧಾನಿ ಮೋದಿ ಯವರು ದೇಶದ ಮಹಿಳೆಯರಿಗೆ ಶಕ್ತಿ ತುಂಬಲು ಮಹಿಳೆಯರು ಸಹ ಪುರುಷರಂತೆ ನಿರ್ಭೀತವಾಗಿ ದೇಶದ ಉದ್ದಾರಕ್ಕಾಗಿ ರಾಜಕಾರಣ ಮಾಡಲು 33% ಮಹಿಳಾ ಮೀಸಲಾತಿ ನೀಡಿದ್ದ ಪ್ರಯುಕ್ತ ಮಹಿಳೆಯರು ಮೋದಿಯವರಿಗೆ ಮತ್ತು ಭಾರತ ಮಾತೆಗೆ ಜಯ ಘೋಷಣೆಗಳನ್ನು ಕೂಗುತ್ತಾ ಹಲವಾರು ಕಲಾತಂಡಗಳೊಂದಿಗೆ ವಿಜಯೋತ್ಸವ ಸಂಭ್ರಮದೊಂದಿಗೆ ಹೆಜ್ಜೆ ಹಾಕುತ್ತಾ ಹೆಮ್ಮೆಯ ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯೆ ಶಕುಂತಲಾ ಶೆಟ್ಟಿ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು. ಸುಜಾತ ಎಸ್ ಮುನಿರಾಜು ಸರ್ವರಿಗೂ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಿ ಮರಿಸ್ವಾಮಿ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಮಾಜಿ ಪಾಲಿಕೆ ಸದಸ್ಯೆ ಉಮಾದೇವಿ ನಾಗರಾಜ್, ವಿಜಯಲಕ್ಷ್ಮಿ ಮಾಜಿ ಪಾಲಿಕೆ ಸದಸ್ಯ ಹಾಗೂ ಮಾಜಿ ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್ ಎನ್ ಗಂಗಾಧರ್, ಕೃಷ್ಣಯ್ಯ, ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ಆರ್ ಪ್ರಕಾಶ್, ವಿನೋದ್ ಗೌಡ, ಚೊಕ್ಕಸಂದ್ರ ಬಿಜೆಪಿ ಮುಖಂಡ ಲಾರಿ ಮುನಿರಾಜು, ಕೈಗಾರಿಕಾ ಪ್ರದೇಶ ವಾರ್ಡಿನ ಬಿಜೆಪಿ ಅಧ್ಯಕ್ಷ ನಿಸರ್ಗ ಕೆಂಪರಾಜು, ಗುರುಪ್ರಸಾದ್, ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಭಾಗವಹಿಸಿದ್ದರು.
