
ಉದಯವಾಹಿನಿ,ಸಿಂಧನೂರು: ಸಿಂಧನೂರು ಮತ್ತು ಮಸ್ಕಿ ಎರಡು ತಾಲೂಕುಗಳನ್ನು ಸರಕಾರ ಕೂಡಲೇ ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕೆಂದು.ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷ ರಾಜ್ಯ ಸಮಿತಿ ಸರಕಾರಕ್ಕೆ ಆಗ್ರಹಿಸುತ್ತದೆ.ರಾಜ್ಯದ ಕಾಂಗ್ರೇಸ್ ಸರಕಾರ ಮತ್ತು ಸ್ಥಳೀಯ ಶಾಸಕರು ಈ ಎರಡು ತಾಲೂಕುಗಳನ್ನು ಬರಪ್ರದೇಶದಿಂದ ಹೊರಗಿಟ್ಟಿದ್ದು ಖಂಡನೀಯವಾಗಿದೆ.
ಎರಡು ತಾಲೂಕುಗಳಲ್ಲಿ ಮುಂಗಾರು ಹಾಗೂ ಹಿಂಗಾರಿನ ಮಳೆ ಸಂಪೂರ್ಣ ಕೈಕೊಟ್ಟಿದ್ದು ರೈತರಿಗೆ ತೀವ್ರ ಸಂಕಷ್ಟದ ಪರಸ್ಥಿತಿ ನಿರ್ಮಾಣವಾಗಿದೆ. ಎಡದಂಡೆ ಕಾಲುವೆ ಇದ್ದರೂ ಸಹ ಕಾಲುವೇ ಮೇಲ್ಭಾಗದಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಭತ್ತ ನಾಟಿ ಮಾಡಿದ್ದು ಕೆಳಭಾಗದ ರೈತರು ಬೆಳೆ ಬೆಳೆಯಲಾರದೆ ಭೂಮಿ ಬೀಳು ಬಿಡುವ ಸ್ಥಿತಿ ಬಂದಿದೆ. ಹಾಗೆಯೇ ಕೂಲಿ ಕಾರ್ಮಿಕರಿಗೆ ಕೃಷಿಯಲ್ಲಿ ಕೆಲಸವಿಲ್ಲದೆ ಬೆಂಗಳೂರಂತಹ ಮಹಾನಗರಗಳಿಗೆ ಗುಳೆ ಹೋಗುವುದು ನಿತ್ಯನಿರಂತರವಾಗಿದೆ.
ಮಸ್ಕಿ ತಾಲೂಕು ಮಳೆಯಾಶ್ರಿತ ಭೂ ಪ್ರದೇಶವಾಗಿರುವುದರಿಂದ ಜನ-ಜನುವಾರುಗಳು ಸಂಕಷ್ಟಕ್ಕೆ ಸಿಲುಕುವ ಅಂಚಿನಲ್ಲಿದ್ದಾರೆ. ಇಲ್ಲಿಯೂ ಕೂಡಾ ಕಾಲುವೇ ಕೆಳಭಾಗದ ರೈತರು ನೀರಿಲ್ಲದೆ, ಯಾವುದೇ ಬೆಳೆಯನ್ನು ಬೆಳೆಯಲಾಗದೆ ಭೂಮಿ ಬರಡಾಗಿದೆ.
ಕಾರಣ ಸಿಂಧನೂರು ಮತ್ತು ಮಸ್ಕಿ ತಾಲೂಕುಗಳನ್ನು ಕೂಡಲೇ ಸರಕಾರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರಪರಿಹಾರ ಕಾಮಗಾರಿಗಳು ಮತ್ತು ಕುಡಿಯುವ ನೀರು, ಸೇರಿದಂತೆ ಜನ-ಜಾನುವಾರುಗಳು ಗುಳೆ ಹೋಗುವುದನ್ನು ತಡೆದು ಜನರ ನೆರವಿಗೆ ಸರಕಾರ ಧಾವಿಸಬೇಕೆಂದು ನಮ್ಮ ಪಕ್ಷದ ಆಗ್ರಹವಾಗಿದೆ. ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯರಾದ ರಾಜ್ಯ ಸಮಿತಿ ಸದಸ್ಯರಾದ ಎಂ ಗಂಗಾಧರ್ ಅವರ ಪತ್ರಿಕೆ ಪ್ರಕಟಣೆ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಬುಸಾಬ ಬೆಳ್ಳಟ್ಟಿ ತಾಲೂಕು ಕಾರ್ಯದರ್ಶಿ. ಹೆಚ್.ಆರ್.ಹೊಸಮನಿ, ಮುದಿಯಪ್ಪ ಹನುಮನಗರ ಕ್ಯಾಂಪ್. ಸೇರಿದಂತೆ ಇತರರು ಉಪಸ್ಥಿತರಿದ್ದರು.
