
ಉದಯವಾಹಿನಿ,ಸಿಂಧನೂರು: ಶಾಸಕರು ಬರೀ ಬರಗಾಲ ಕುರಿತು ಪತ್ರ ಬರೆದರು ಸಾಲದು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಿ ಬರಗಾಲ ಪೀಡಿತ ಎಂದು ಘೋಷಣೆ ಮಾಡಲಿ.ಪಕ್ಕದ ತಾಲ್ಲೂಕು ಗಂಗಾವತಿ ಕಾರಟಗಿ ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು. ಆದರೂ ಸಹ ಸರ್ಕಾರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದೆ. ಬಾದರ್ಲಿ ಇದರ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ..?? ಮಾಡಿದ್ದು. ಏನಾದರೂ ಉದಾಹರಣೆ ಇದೆಯೇ.. ಬರೀ ಪತ್ರ ಬರೆದಿದ್ದೇವೆ ಎಂದು ಜನರು ಕಿವಿಗೆ ಹೂ ಇಡುವ ಕೆಲಸ ಮಾಡಬೇಡಿ..! ಅಲ್ಲಿನ ಶಾಸಕರು ಸಚಿವರು ಸರ್ಕಾರದ ಮೇಲೆ ಒತ್ತಡ ಹಾಕಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದಾರೆ.. ಇದರಲ್ಲಿ ತಾರತಮ್ಯ ಯಾಕೆ ಮಾಡುತ್ತೀರಿ.ಎಂದು ಹಂಪನಗೌಡ ಬಾದರ್ಲಿ ಅವರು ವಿರುದ್ಧ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರ ಆರೋಪ ಮಾಡಿದರು.
ನಗರದ ತಮ್ಮ ನಿವಾಸದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ. ಮಾತನಾಡಿದ ಅವರು ಈಗಾಗಲೇ ತುಂಗಭದ್ರಾ ಡ್ಯಾಂ ನಲ್ಲಿ ನೀರು ಖಾಲಿಯಾಗಿದ್ದು . ನೀರು ಸಂಗ್ರಹಣಾ ಖ್ಯಾತಿಯ
ನಾಲೈದು ತಿಂಗಳಲ್ಲಿ ಬೀಕರ ಬರಗಾಲ ಉಂಟಾಗಿ ರೈತರ ಬೆಳೆದ ಭತ್ತ ಜೋಳ ಇತರ ಬೆಳೆಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಮತ್ತು ಕೆಳಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ.ಬೆಳೆ ಕೈಗೆ ಸೇರುವುದಿಲ್ಲ.ಎಂದು ರೈತ ಆತಂಕಕ್ಕೆ ಒಳಗಾಗಿದ್ದಾನೆ. ಮಾಜಿ ಸಚಿವ ನಾಡಗೌಡ ಶಾಸಕ ಹಂಪನಗೌಡ ಬಾದರ್ಲಿ ವಿರುದ್ಧ ವಾಗ್ದಾಳಿ ನಡೆಸಿದರು.
ಈಗಾಗಲೇ ಕಾಲುವೆಗಳಿಗೆ 4300 ಕ್ಯೂಸೆಕ್ ನೀರು ಹರಿ ಬಿಟ್ಟಿದ್ದಾರೆ. ಇದೇ ರೀತಿಯಲ್ಲಿ ನೀರು ಮುಂದುವರಿದರೆ ನವಂಬರ್ ತಿಂಗಳು ನಲ್ಲಿ ಇರುವ ನೀರು ಖಾಲಿ ಮಾಡುವುದಕ್ಕೆ ಹೊರಟಿದ್ದಾರೆ.
ಪ್ರಸ್ತುತ ನಮ್ಮ ಡ್ಯಾಂ ನಲ್ಲಿ 62 ಟಿ ಎಂ.ಸಿ. ನೀರು ಇದ್ದು. ಈಗ 4 ಟಿ.ಎಂ.ಸಿ ಪೂರೈಕೆ 2ಟಿ.ಎಂ.ಸಿ.ಡೆಡ್ ಸ್ಟೋರೇಜ್.2 ಟಿ ಎಂ ಸಿ ವಿಜಯ ನಗರ ಕಾಲುವೆಗೆ ಬಿಟ್ಟಿದ್ದು. ಇನ್ನು 54 ಟಿ.ಎಂ ಸಿ ನೀರು ಕರ್ನಾಟಕ ರಾಜ್ಯ ಎಡ ಮತ್ತು ಬಲ ದಂಡೆಗೆ ಸೇರಿ 12 ಟಿ ಎಂ ಸಿ.ಕಾಲುವೆಗೆ ಬಿಡಲಾಗುತ್ತದೆ.
20 ಟಿ ಎಂ ಸಿ ನೀರು H.L.C. LLC ಸೇರಿ. ಸುಮಾರು 8-10 ಟಿ ಎಂ ಸಿ ನೀರು ಉಳಿಯಬಹುದು. ಇದರ ಮದ್ಯೆ ಶಾಸಕರು ಎಚ್ಚರಿಕೆ ವಹಿಸಿ ನೀರು ಕೊಡಿಸುವುದಕ್ಕೆ. ತಾವು ಮುಂದಾಗಬೇಕು. ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೆ ನಿಯೋಗ ತೆಗೆದು ಕೊಂಡು ಹೋಗಿ. ನಾವೆಲ್ಲರೂ ಬರಲು ಸಿದ್ಧರಿದ್ದೇವೆ. ತಾಲ್ಲೂಕುನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದರೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶಾಸಕರಿಗೆ ವೆಂಕಟರಾವ್ ನಾಡಗೌಡ ಎಚ್ಚರಿಕೆ ಸಂದೇಶವನ್ನು ನೀಡಿದರು.
ಈ. ಸಂ. ಜೆಡಿಎಸ್ ಪಕ್ಷದ ಮುಖಂಡರು ಅಶೋಕ್ ಗೌಡ ಚಂದ್ರಶೇಖರ ಮೈಲಾರ.ಎಂ ಡಿ ನದೀಮ್ ಮುಲ್ಲಾ ಜಿಲಾನಿ ಪಾಷಾ ಅಲ್ಲಮ ಪ್ರಭು ಪೂಜಾರಿ ವೆಂಕೋಬ ಕಲ್ಲೂರು ವೀರಭದ್ರ ಗೌಡ ಸೇರಿದಂತೆ ಇತರರು ಇದ್ದರು.
