ಉದಯವಾಹಿನಿ,ಸಿರುಗುಪ್ಪ : ತಾಲೂಕಿನ ಸಿರಿಗೇರಿ ಗ್ರಾಮದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಆಂಜನೇಯ್ಯ ಸ್ವಾಮಿ ದೇವಸ್ಥಾನಗಳ ಹಿಂದಿನ ರಸ್ತೆಯು ಬೀದಿಬದಿ ವ್ಯಾಪಾರಿಗಳು, ಸಾರ್ವಜನಿಕರು ಎಸೆಯುವ ಕಸದ ತ್ಯಾಜ್ಯದಿಂದ ೨ನೇ ವಾರ್ಡಿಗೆ ಹೋಗಲು ತೊಂದರೆಯಾಗುತ್ತಿದೆ.ಯಾವಾಗಲೂ ಕಸದಿಂದ ಕೂಡಿರುವ ರಸ್ತೆಯಲ್ಲಿ ಮತ್ತು ವ್ಯರ್ಥವಾಗಿ ಬೆಳೆದಿರುವ ಸಸ್ಯದಿಂದ ಕೂಡಿದ ಕೆರೆ ಹತ್ತಿರ ಖಾಸಗಿ ವ್ಯಕ್ತಿಗಳು ಹಾಕಿರುವ ತಿಪ್ಪೆಗಳಿಂದಾಗಿ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಮಲ ಮೂತ್ರ ವಿಸರ್ಜನೆಗೆ ತೆರಳುತ್ತಿದ್ದು ಗಬ್ಬು ನಾರುತ್ತಿರುವ ವಾಸನೆಯಿಂದಾಗಿ ಪಕ್ಕದಲ್ಲಿರುವ ಮನೆಗಳಿಗೆ, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಮಳಿಗೆಗಳ ವ್ಯಾಪಾರಿಗಳಿಗೆ ಕಿರಿಕಿರಿಯಾಗುತ್ತಿದೆ.ಇಲ್ಲಿನ ಊರು ಕೆರೆಯಲ್ಲಿ ಮೊದಲು ಅಂದರೆ ೧೯೮೧ ರಿಂದ ೨೦೦೦ ಇಸ್ವಿಯವರೆಗೆ ಮಳೆಗಾಲದಲ್ಲಿ ಸಂಗ್ರಹವಾಗುತ್ತಿದ್ದ ಇದೇ ನೀರನ್ನು ದನಕರು, ಕುರಿಮೇಕೆಗಳಿಗೆ ನೀರು ಕುಡಿಸುವುದು ಮತ್ತು ಸ್ನಾನ ಮಾಡುತ್ತಿದ್ದೆವು. ಬೇಸಿಗೆಯಲ್ಲಿ ಕೆರೆ ಬತ್ತಿದಾಗ ರೈತರು ದಡದ ಸುತ್ತಲೂ ರೈತರು ಕಣವನ್ನು ಮಾಡುತ್ತಿದ್ದರು.ಆದರೆ ಕೆಲ ವರ್ಷಗಳಿಂದ ಗ್ರಾಮದ ವಿವಿಧ ವಾರ್ಡ್ಗಳ ಚರಂಡಿ ನೀರು ದಿನನಿತ್ಯವೂ ಸೇರ್ಪಡೆಯಾಗುತ್ತಿದೆಯಲ್ಲದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷö್ಯತೆಯಿಂದಾಗಿ ಸೂಕ್ತ ನಿರ್ವಹಣೆಯಿಲ್ಲದ ಕಾರಣ ಕೆರೆಯ ಉದ್ದೇಶ ಮತ್ತು ಐತಿಹಾಸಿಕತೆ ಚರಂಡಿ ಪಾಲಾಗಿದೆಂದು ಗ್ರಾಮಸ್ಥರಾದ ಹೆಚ್.ಎಮ್.ನಾಗರಾಜ ಸ್ವಾಮಿ, ಹನುಮೇಶ, ಅನ್ವರ್‌ಭಾಷ, ಮುಕ್ತಿಯಾರ್ ಬೇಸರ ವ್ಯಕ್ತಪಡಿಸಿದರು.
ಸಂಬAದಿಸಿದ ಅಧಿಕಾರಿಗಳು ಜನಪ್ರತಿನಿಧಿಗಳ ಕೆರೆಯ ಅಬಿವೃದ್ದಿಗಾಗಿ ಉದ್ಯೋಗ ಖಾತ್ರಿಯಡಿ ಯೋಜನೆ ರೂಪಿಸಿ ಸುತ್ತಲೂ ಬೆಳೆದಿರುವ ವ್ಯರ್ಥ ಸಸ್ಯ, ಕಸ ಹಾಗೂ ಒತ್ತುವರಿಯನ್ನು ತೆರವುಗೊಳಿಸಿ ಸುತ್ತಲೂ ತಂತಿಬೇಲಿ ಅಳವಡಿಸಿ ಸ್ವಚ್ಛ ವಾತಾವರಣ ನಿರ್ಮಿಸಬೇಕೆಂದು ಒತ್ತಾಯಿಸಿದರು.
