ಉದಯವಾಹಿನಿ,ಸಿರುಗುಪ್ಪ : ನಗರದ ಡಿವೈಎಸ್‌ಪಿ ಕಛೇರಿಯಲ್ಲಿ ತಾಲೂಕು ವಕೀಲರ ಸಂಘದ ಪದಾಧಿಕಾರಿಗಳಿಂದ ವಕೀಲ ಭೀಮರೆಡ್ಡಿ ಹಾಗೂ ಅವರ ಕುಟುಂಬಸ್ಥರ ಮೇಲೆ ಹಚ್ಚೊಳ್ಳಿ ಪೋಲೀಸ್ ಠಾಣೆಯಲ್ಲಿ ಖಾಸಗಿಯವರಿಂದ ಪ್ರಕರಣ ದಾಖಲಾಗಿದ್ದು ಪ್ರಕರಣ ತಡೆಬೇಕೆಂದು ಪ್ರಭಾರಿ ಡಿವೈಎಸ್‌ಪಿ ಎಸ್.ಟಿ.ಒಡೆಯರ್ ಅವರಿಗೆ ಮೌಖಿಕವಾಗಿ ಮನವಿ ಮಾಡಲಾಯಿತು.
ಹಿರಿಯ ವಕೀಲ ವೀರೇಶ ಮಾತನಾಡಿ ಜಗಳವಾಡಿಕೊಂಡ ಉಭಯ ಕಕ್ಷಿದಾರರು ಅವರವರ ವಕೀಲರ ಹತ್ತಿರ ಕಾನೂನು ಸಲಹೆ ಪಡೆಯಲು ಹೋದಾಗ ಕಾನೂನಿನ ಸಲಹೆ ನೀಡುವುದು ವಕೀಲರ ಕರ್ತವ್ಯವಾಗಿದೆ.ಕಾನೂನು ಸಲಹೆ ನೀಡಿದ್ದನ್ನು ಪ್ರಶ್ನಿಸಿರುವ ವಿರೋಧಿ ಬಣದ ಕಕ್ಷಿದಾರರು ವಕೀಲರನ್ನು ಸೇರಿ ಅವರ ಕುಟುಂಬದವರ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನಾಗಿ ಮಾಡಿರುವುದನ್ನು ವಿರೋಧಿಸಿ ಇಂದಿನ ನ್ಯಾಯಾಲದ ಕಲಾಪವನ್ನು ಬಹಿಷ್ಕರಿಸಲಾಗಿದೆ.ಈ ರೀತಿ ವಕೀಲರ ಮೇಲೆ ಪ್ರಕರಣ ದಾಖಲಿಸುವುದರಿಂದ ನಮ್ಮ ವೃತ್ತಿಗೆ ಒಡೆತ ಬೀಳುತ್ತದೆ. ಮುಂದಿನ ದಿನಗಳಲ್ಲಾದರೂ ವಕೀಲರ ಮೇಲೆ ಪ್ರಕರಣ ದಾಖಲಿಸುವ ಮುನ್ನ ಅವರ ಮತ್ತು ಕುಟುಂಬದವರ ಪಾತ್ರವಿದೆಯೋ ಇಲ್ಲವೋ ಎಂಬ ಸತ್ಯಾಸತ್ಯತೆಯನ್ನು ಪರಿಶೀಲಿಸಿ ತಪ್ಪಿದಲ್ಲಿ ಮಾತ್ರ ಪ್ರಕರಣ ದಾಖಲಿಸಿ ಯಾವುದೇ ಕಕ್ಷಿದಾರರು ಅನಗತ್ಯವಾಗಿ ವಕೀಲರನ್ನು ಹತ್ತಿಕ್ಕುವಂತಹ ಕೆಲಸವನ್ನು ತಡೆಯಲು ನಿಮ್ಮ ಕಿರಿಯ ಅಧಿಕಾರಿಗಳಿಗೆ ಸಲಹೆ ನೀಡಬೇಕೆಂದು ಡಿವೈಎಸ್‌ಪಿ ಅವರಿಗೆ ತಿಳಿಸಿದರು.
ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಪ್ಯಾಟೆಗೌಡ ಸುದ್ದಿಗಾರರೊಂದಿಗೆ ಮಾತನಾಡಿ ಸುಳ್ಳು ದಾಖಲು ಮಾಡಿರುವವರ ವಿರುದ್ದ ತನಿಖೆ ಮಾಡಿ ಚಾರ್ಜ್ಶೀಟ್‌ನಲ್ಲಿ ಭೀಮರೆಡ್ಡಿ ಹಾಗೂ ಕುಟುಂಬಸ್ಥರ ತೆಗೆಯುವಂತೆ ಮನವಿ ಮಾಡಲಾಗಿದೆಂದರು.ಇದೇ ವೇಳೆ ಹಿರಿಯ ವಕೀಲರಾದ ಎನ್.ಅಬ್ದುಲ್‌ಸಾಬ್, ವೀರೇಶಗೌಡ, ಸುಧಾಕರರೆಡ್ಡಿ, ಮಂಜುನಾಥ, ವೆಂಕೋಬ, ಉದಯಶಂಕರ್, ವೆಂಕಟೇಶನಾಯ್ಕ್ ಹಾಗೂ ಇನ್ನಿತರರು ಇದ್ದರು

Leave a Reply

Your email address will not be published. Required fields are marked *

error: Content is protected !!