ಉದಯವಾಹಿನಿ ತಾಳಿಕೋಟಿ: ಸಹಕಾರ ಸಂಘಗಳು ರೈತರ ಜೀವನಾಡಿ ಗಳಾಗಿದ್ದು ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲಿಕ್ಕಾಗಿ ಪ್ರಯತ್ನಿಸುತ್ತಿವೆ ಗ್ರಾಮೀಣ ಪ್ರದೇಶದಲ್ಲಿ ಈ ಸಂಘಗಳು ರೈತಾಪಿ ಜನರಿಗೆ ತುಂಬಾ ಅನುಕೂಲವಾಗಿವೆ. ಅವರೇ ಇದರ ನೈಜ ಮಾಲೀಕರಾಗಿದ್ದಾರೆ ಎಂದು ಸಂಘದ ನಿರ್ದೇಶಕ ಡಾ. ಬಸವರಾಜ ಅಸ್ಕಿ ಹೇಳಿದರು. ರವಿವಾರ ತಾಲೂಕಿನ ಕೊಣ್ಣೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ 2022 23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳ ಅಭಿವೃದ್ಧಿಗಾಗಿ ಎಲ್ಲರೂ ಸಹಕರಿಸಬೇಕಾಗಿದೆ ಸಂಘ ನನ್ನ ಮನೆ ಎಂಬ ಭಾವನೆ ಎಲ್ಲರಲ್ಲೂ ಇರಬೇಕು ಇದರ ಸಂಸ್ಥಾಪಕರು ಸಾಕಷ್ಟು ಕಷ್ಟಪಟ್ಟು ಬೆಳೆಸಿದ್ದಾರೆ ಈ ಸಣ್ಣ ಸಂಘ ಇನ್ನೂ ಹೆಚ್ಚಿಗೆ ಬೆಳೆಯಬೇಕಾದರೆ ಇದರ ಆರ್ಥಿಕ ಸ್ಥಿತಿವಂತ ಸದಸ್ಯರು ಉದಾರ ಮನಸ್ಸಿನಿಂದ ಸಹಾಯ ಮಾಡಲು ಮುಂದೆ ಬರಬೇಕು ನಾವು ನಮ್ಮ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದೇವೆ ಎಂದರು. ನ್ಯಾಯವಾದಿ ತಿಪ್ಪಣ್ಣ ದೊಡ್ಡಮನಿ ಮಾತನಾಡಿ ಈ ಸಂಘವು ಸಾಕಷ್ಟು ಬೆಳದಿದೆ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ನಾವೆಲ್ಲರೂ ಆಸಕ್ತಿ ವಹಿಸಬೇಕು ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕೊರತೆ ಇದೆ ಆದಷ್ಟು ಬೇಗ ದೂರಿಕರಿಸಲು ಪ್ರಯತ್ನಿಸಬೇಕು ಸಾಲಗಳನ್ನು ಸಕಾಲದಲ್ಲಿ ಮರುಪಾವತಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು. ಸಂಘದ ಕಾರ್ಯನಿರ್ವಹಣಾಧಿಕಾರಿ ರಾಮನಗೌಡ ಹಂದ್ರಾಳ ವಾರ್ಷಿಕ ವರದಿ ವಾಚಿಸಿದರು. ಕೊಣ್ಣೂರ ಹಿರೇಮಠದ ಪರಮಪೂಜ್ಯಶ್ರೀ ಶ್ರೀನಾಥ್ ಶ್ರೀಗಳು ಸಾನಿಧ್ಯ ವೈಸಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ಚಿದಾನಂದ ಯಾಳವಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಗಣ್ಯರಾದ ಶಂಕರಗೌಡ ಹಿಪ್ಪರಗಿ. ಬಾಪುಗೌಡ ದ್ಯಾಪುರ್. ರುದ್ರಗೌಡ ನೀರಲಗಿ. ಬಿ.ಸಿ. ಪಾಟೀಲ್. ಚೆನ್ನಪ್ಪ ಹುಲ್ಲೂರ್. ಗೌಡಪ್ಪಗೌಡ ಹಡಲ್ಗೇರಿ. ಶಂಕರಗೌಡ ಅಸ್ಕಿ. ಸಿಸಿ ಪಾಟೀಲ್. ಸಿದ್ದನಗೌಡ ಪೊಲೀಸ್ ಪಾಟೀಲ್. ಉಪಾಧ್ಯಕ್ಷ ನಬಿ ಸಾವಲಿ ಮಕಾನದಾರ. ನಿರ್ದೇಶಕರುಗಳಾದ ಸಂಗನಗೌಡ ಪೋಲಿಸಿ. ರಾಮನಗೌಡ ಜಲಪುರ್. ರೇವಣಸಿದ್ದಪ್ಪಗೌಡ ಹಡಲ್ಗೇರಿ. ವೀರೇಶ್ ಅಸ್ಕಿ. ಮೊಮ್ಮದ್ ರಫೀಕ್ ಚಬನೂರ್. ಶ್ರೀಮತಿ ಸಂಗಮ ಹಡಲ್ಗೇರಿ. ಶ್ರೀಮತಿ ಮಾದೇವಿ ಅಂಬಳನೂರು. ಪರಪ್ಪ ಮಾದರ್ ಇದ್ದರು. ಅಶೋಕ್ ಹಡಲಗೇರಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
