ಉದಯವಾಹಿನಿ ಹೊಸಕೋಟೆ :ರಸ್ತೆಗಳು ಅಭಿವೃದ್ಧಿಯಾದರೆ ನಗರೀಕರಣವಾಗಿ ವ್ಯಾಪಾರ ವಹಿವಾಟುಗಳು ಹೆಚ್ಚುತ್ತವೆ. ಸ್ಥಳೀಯರಿಗೆ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಜನರುಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ತಾಲೂಕಿನ ಕಸಬಾ ಹೋಬಳಿಯ ರಾಜ್ಯ ಹೆದ್ದಾರಿ೪ರ ಕಣ್ಣೂರಹಳ್ಳಿಯಿಂದ ವಣಚನಹಳ್ಳಿವರೆಗಿನ ರಸ್ತೆ ಹಾಗೂ ರಾ.ಹೆ.2೦7ರ ನಡುವತ್ತಿಯಿಂದ ಪರಮನಹಳ್ಳಿವರೆಗೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆಇಲಾಖೆಯ 5೦54 ಯೋಜನೆಯಡಿ 4.9 ಕೋಟಿರೂ. ವೆಚ್ಚದರಸ್ತೆಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದರು.ಹೊಸಕೋಟೆಕ್ಷೇತ್ರದ ಸಮಗ್ರಅಭಿವೃದ್ಧಿಗಾಗಿ ತಯಾರಿಸಿಕೊಂಡಿರುವ ನೀಲನಕ್ಷೆಅನುಷ್ಠಾನ ಕಾರ್ಯಕ್ಕೆ ಹೆಜ್ಜೆಯಿಟ್ಟಿದ್ದು, ಗುಂಡಿಗಳಿ೦ದ ನಿತ್ಯ ಸಮಸ್ಯೆಎದುರಿಸುತ್ತಿರುವರಾಜ್ಯಹೆದ್ದಾರಿ ೪ರ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದು ಶೀಘ್ರದಲ್ಲೇ ಗುಣಮಟ್ಟದರಸ್ತೆಅಭಿವೃದ್ಧಿಯಾಗಲಿದೆ. 21 ಕೋಟಿ ವೆಚ್ಚದಲ್ಲಿ ರಾ.ಹೆ.೨೦೭ರ ಹೊಸಕೋಟೆ-ಸರ್ಜಾಪುರರಸ್ತೆ ನಿರ್ಮಾಣಕ್ಕೆಕ್ರಮ ಕೈಗೊಳ್ಳಲಾಗಿದೆ. 1೦4 ಕೋಟಿ ವೆಚ್ಚದ ಕೊರಳೂರು ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆಕೇಂದ್ರ ಸಚಿವ ನಿತಿನ್‌ಗಡ್ಕರಿ ಭೇಟಿ ಮಾಡಿಅನುಮತಿ ಪಡೆಯಲಾಗಿದೆ.ಕೆಸಿ ವ್ಯಾಲಿ ಪೈಪ್‌ಲೈನ್ ಮಾರ್ಗ ಬದಲಾವಣೆಗೆ ೧೦ ಕೋಟಿರೂ. ಹಣವನ್ನುರಾಜ್ಯ ಸರಕಾರ ಭರಿಸುವ ನಿರ್ಣಯಕೈಗೊಂಡಿದೆಎAದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುನಿಶಾಮಣ್ಣ, ಜಿಪಂನ ಮಾಜಿ ಸದಸ್ಯ ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಉಪಾಧ್ಯಕ್ಷರವೀಂದ್ರ, ಬಿಎಂಆರ್‌ಡಿಎ ಮಾಜಿಅಧ್ಯಕ್ಷ ನಾರಾಯಣಗೌಡ, ಗ್ರಾಪಂನ ಸದಸ್ಯರಾದ ಶೋಭಾಸಂತೋಷ್‌ಕುಮಾರ್, ಮಂಜುನಾಥ್, ಮುಖಂಡರಾದ ಸುನಿಲ್, ಸತೀಶ್, ಸಂತೋಷ್, ಕಣ್ಣೂರಹಳ್ಳಿ ಮುನಿಯಪ್ಪ, ಕೆ.ಮಲ್ಲಸಂದ್ರ ಶೇಷಪ್ಪ, ಸಮೇತನಹಳ್ಳಿ ಸೊಣ್ಣಪ್ಪ, ರಮೇಶ್, ಬುಲೆಟ್ ವೆಂಕಟೇಶ್, ಎಂ.ಎಸ್ ಮಂಜು, ಗುತ್ತಿಗೆದಾರ ಮಂಚಪನಹಳ್ಳಿ ಚಂದ್ರಶೇಖರ್‌ಇದ್ದರು
