???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಉದಯವಾಹಿನಿ ಶಿಡ್ಲಘಟ್ಟ:ಇಂದಿನ ಜನಸಂಖ್ಯೆ ಮತ್ತು ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದರೆ ಸಾಲದು,ಮುಂದಿನ 25 ವರ್ಷಗಳ ನಂತರದ ಪರಿಸ್ಥಿತಿ ಮತ್ತು ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ನಾವು ಇಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು ನಗರದಿಂದ ಹೊರಗೆ ಮಾಡಬೇಕಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸಲು ಸರ್ಕಾರದಿಂದ 100 ಕೋಟಿ ರೂ.ಅನುದಾನ ಬಿಡುಗಡೆ ಆಗಿದ್ದು ಮಾರುಕಟ್ಟೆ ನಿರ್ಮಾಣಕ್ಕೆ ಜಾಗ ಗುರ್ತಿಸುವ ಬಗ್ಗೆ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಪ್ರವಾಸಿ ಮಂದಿರದಲ್ಲಿ ಶಾಸಕ ರವಿಕುಮಾರ್, ಕಂದಾಯ ಇಲಾಖೆ, ರೇಷ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಚರ್ಚಿಸಿದರು.ಈಗಿರುವ ಮಾರುಕಟ್ಟೆ ಜಾಗದಲ್ಲೆ ಹೈಟೆಕ್ ಮಾರುಕಟ್ಟೆ ನಿರ್ಮಿಸಿ ಇಲ್ಲವೇ ಶಿಡ್ಲಘಟ್ಟ ನಗರಕ್ಕೆ ಹತ್ತಿರದಲ್ಲಿರುವ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಿ ಎಂದು ಬೇಡಿಕೆಯಿಟ್ಟ ರೀಲರುಗಳ ಬೇಡಿಕೆಗೆ ಉತ್ತರಿಸಿದ ಸಚಿವರು, ಈಗ ಮಾರುಕಟ್ಟೆ ಇರುವುದು ಕೇವಲ 5 ಎಕರೆ ಜಾಗದಲ್ಲಿ ಅಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಸಾಧ್ಯವಿಲ್ಲ. ನಾವು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ಹೊರಗಡೆ ವಿಶಾಲವಾದ ಜಾಗದಲ್ಲಿಯೆ ಮಾರುಕಟ್ಟೆಯನ್ನು ನಿರ್ಮಿಸಬೇಕಾಗುತ್ತದೆ ಎಂದರು.ಶಾಸಕ ಬಿ.ಎನ್.ರವಿಕುಮಾರ್ ಅವರು ಈಗಾಗಲೆ ಹನುಮಂತಪುರ ವರದನಾಯಕನಹಳ್ಳಿ ಬಳಿ ಸರ್ಕಾರಿ ಜಮೀನಿನಲ್ಲಿ ಹೈಟೆಕ್ ಮಾರುಕಟ್ಟೆಗೆ ಬೇಕಾಗುವಷ್ಟು 15 ಎಕರೆಗೂ ಹೆಚ್ಚು ಜಾಗವನ್ನು ಗುರ್ತಿಸಲಾಗಿದೆ. ಅಲ್ಲಿ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಬಹುದು ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.ಇಬ್ಬರು ರೈತರು ಅನುಭವದಲ್ಲಿದ್ದು ಅವರ ಬಳಿ ಯಾವುದೇ ದಾಖಲೆಗಳು ಇಲ್ಲ. ಅವರನ್ನು ಈಗಾಗಲೆ ಕರೆದು ಮಾತನಾಡಿದ್ದು ಅವರು ಅನುಭವವನ್ನು ಬಿಟ್ಟುಕೊಡಲು ತಯಾರಿದ್ದು ಒಪ್ಪಿದ್ದಾರೆ. ಅವರು ಇದೀಗ ಜಮೀನಿನಲ್ಲಿ ಇದ್ದು ಅಲ್ಲಿಗೆ ನಾವು ತೆರಳಿದರೆ ಅಲ್ಲಿಯೆ ರೈತರು ಅವರ ಒಪ್ಪಿಗೆ ನೀಡುತ್ತಾರೆ ಎಂದು ಅಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಸೂಕ್ತ ಮತ್ತು ಎಲ್ಲವೂ ಅನುಕೂಲ ಇದೆ ಎಂದು ಶಾಸಕ ಬಿಎನ್ ರವಿಕುಮಾರ್ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.
ಜಾಗದ ನಕ್ಷೆಯನ್ನು ಪರಿಶೀಲಿಸಿದ ಸಚಿವರು ಈ ಜಾಗದಲ್ಲಿ ಈಗಾಗಲೆ ಹಲವರಿಗೆ ಜಾಗ ಮಂಜೂರು ಆಗಿದೆ, ಕೆಲವರು ಅನುಭವದಲ್ಲಿದ್ದಾರೆ.ಯಾವುದೇ ಸಣ್ಣ ದಾಖಲೆ ಇದ್ದರೂ ಸಹ ಕೋರ್ಟ್ ಗೆ ಹೋಗಬಹುದು.
ಇದೆಲ್ಲವೂ ಮುಂದೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಅಡ್ಡಿಯಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಇದೆಲ್ಲದಕ್ಕೂ ಒಪ್ಪದ ಸಚಿವರು ಯಾವುದೆ ಸಣ್ಣ ಪುಟ್ಟ ಅಡೆ ತಡೆ ಇದ್ದರೂ ಅಲ್ಲಿ ಯೋಜನೆಯನ್ನು ಆರಂಭಿಸುವುದು ಬೇಡ, ಸಿಎಂ ಸಹ ಅದಕ್ಕೆ ಒಪ್ಪುವುದಿಲ್ಲ. ಎಲ್ಲ ಅಡಚಣೆಗಳನ್ನು ನಿವಾರಿಸಿದ ಮೇಲಷ್ಟೆ ಅಲ್ಲಿ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸುವ ಚಿಂತನೆ ಮಾಡೋಣ ಎಂದು ಶಾಸಕರ ಆಶಯಕ್ಕೆ ತಣ್ಣೀರೆರಚಿ ಸ್ಥಳ ವೀಕ್ಷಿಸದೆ ಅಲ್ಲಿಂದಲೆ ಸಚಿವ ಡಾ.ಎಂ ಸಿ ಸುಧಾಕರ್ ಕಾಲ್ಕಿತ್ತರು.
