ಉದಯವಾಹಿನಿ, ದೇವರಹಿಪ್ಪರಗಿ: ಪಟ್ಟಣದ ಹೃದಯ ಭಾಗದ ವಾ.ನಂ-4ರ ಬೇವಿನಕಟ್ಟಿಯಲ್ಲಿರುವ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆ ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಾಡಾಗಿದ್ದು, ಮದ್ಯದ ಬಾಟಲಿ, ಮಲಮೂತ್ರ ವಿಸರ್ಜನೆ,ಕಸ ಎಸೆಯುವ ತಾಣವಾಗಿದೆ.ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಸ್ಥಳೀಯ ಯುವ ಮುಖಂಡರು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರದಂದು ಮನವಿ ಸಲ್ಲಿಸಿ ಮಾತನಾಡಿದ ಯುವ ಮುಖಂಡರಾದ ಸೋಮು ದೇವೂರ, ಹಳೇ ಸರ್ಕಾರಿ ಶಾಲೆವಿದ್ದು, ಇದು ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಇಲ್ಲಿ ಕಳೆದ ಶತಮಾನ ವರ್ಷಗಳ ಹಿಂದೆ ಪ್ರಾರಂಭವಾದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಶಾಲೆ ಸ್ಥಳಾಂತರಗೊಂಡಿದ್ದು ಈಗ ಇದರ ಬಳಕೆ ಇಲ್ಲದೆ ಅನೈತಿಕ ತಾಣವಾಗಿ ಪರಿಣಮಿಸಿದೆ ಹಲವಾರು ಬಾರಿ  ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಶಾಲೆ-ಗ್ರಂಥಾಲಯ ಅಥವಾ ಸಾರ್ವಜನಿಕ ಉದ್ದೇಶಕ್ಕಾದರೂ ಬಳಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಯುವ ಮುಖಂಡರುಗಳಾದ ಮಂಜುನಾಥ ಮಠಪತಿ, ಅಭಿಷೇಕ ಪಾಟೀಲ, ಸಾಹೇಬಗೌಡ ಬೂದಿಹಾಳ, ಆನಂದ ಸದಯ್ಯನಮಠ, ಸಚಿನ್ ಹಳ್ಳಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!